ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ದಾಖಲಿಸಿದ ಹತ್ತು ತಿಂಗಳ ನಂತರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಬುಧವಾ
ಡಾರ್ಜಿಲಿಂಗ್ ಮುನ್ಸಿಪಾಲಿಟಿಯ 32 ಸ್ಥಾನಗಳ ಪೈಕಿ ಸಾಮಾಜಿಕ ಕಾರ್ಯಕರ್ತ ಅಜೋಯ್ ಎಡ್ವರ್ಡ್ ಅವರ ಸಂಘಟನೆಯಾದ ಹ್ಯಾಮ್ರೊ ಪಾರ್ಟಿ 17 ರಲ್ಲಿ ಮುನ್ನಡೆ ಸಾಧಿಸಿದೆ.
107 ಮುನ್ಸಿಪಾಲಿಟಿ ಗಳಲ್ಲಿ 93 ರಲ್ಲಿ ಗೆಲುವು ಸಾಧಿಸಿದ್ದು, ಪ್ರತಿಪಕ್ಷವನ್ನು ಧೂಳೀಪಟ ಮಾಡಿದೆ ಎಂದು ಎಸ್ ಇಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಟಿಎಂಸಿ ಮುನ್ನಡೆ ಸಾಧಿಸದ ಏಕೈಕ ನಗರ ಸ್ಥಳೀಯ ಸಂಸ್ಥೆ ಇದಾಗಿದೆ.ಟಿಎಂಸಿ ಕಾಂತಿ ನಗರಪಾಲಿಕೆಯಲ್ಲಿ ಅಧಿಕಾರಿ ಕುಟುಂಬವನ್ನು ದೂರವಿಟ್ಟಿದೆ.
ಕಾಂತಿ ಮುನ್ಸಿಪಾಲಿಟಿಯ 21 ವಾರ್ಡ್‌ಗಳಲ್ಲಿ ತೃಣಮೂಲ 18 ವಾರ್ಡ್‌ಗಳನ್ನು ಗೆದ್ದುಕೊಂಡಿದೆ. ಎರಡು ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಒಂದು ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕಾಂತಿ ಮುನ್ಸಿಪಾಲಿಟಿಯು 30 ವರ್ಷಗಳಲ್ಲಿ ಮೊದಲ ಬಾರಿ ಅಧಿಕಾರಿ ಕುಟುಂಬದ ಕೈತಪ್ಪಿದೆ.