Breaking News

ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸದ ಸಂಸದ: ಸಿ.ಎಂ.ಇಬ್ರಾಹಿಂ ಆಕ್ರೋಶ

Spread the love

ಮಡಿಕೇರೀ: ಕೊಡಗು ದೇಶದ ರಕ್ಷಣೆಗೆ ಮುಡಿಪಾಗಿಟ್ಟಿರುವ ನಾಡು ಈ ಜಿಲ್ಲೆಯಿಂದ ಬಹಳಷ್ಟು ಮಂದಿ ದೇಶಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಈ ಸಂದರ್ಭ ಸಿ.ಎಂ.ಇಬ್ರಾಹಿಂ ಹೇಳಿದರು.

ಫೆಬ್ರವರಿ 25ರಂದು ಮೃತಪಟ್ಟ ಹುತಾತ್ಮ ಯೋಧ ಅಲ್ತಾಫ್ ಮನೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಇಬ್ರಾಹಿಂ , ಸಂಸದ ಪ್ರತಾಪ್ ಸಿಂಹ ಅವರು ಸಂಸದರಾಗಿರುವ ಬಗ್ಗೆಯೇ ಸಂಶಯವಿದ್ದು ಪತ್ರಿಕೆಯಿಂದ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದ ಪರಿಣಾಮ ಈ ರೀತಿಯಾಗಿದೆ ದಯೆ ಧರ್ಮ ಮಾನವೀಯತೆಯ ಬಗ್ಗೆ ಅವರು ಮೊದಲು ತಿಳಿಯಲಿ ಎಂದರು.

 

ಕುಂಕುಮ , ನಮಾಜ್ ಮಾಡಿದರೆ ಮಾತ್ರ ಧರ್ಮವಲ್ಲ ಅದರ ಬದಲಾಗಿ ದಯೆ ಅನುಕಂಪ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ ಎಂಬುದು ಎಲ್ಲರಿಗೂ ತಿಳಿಯಲಿ ಎಂದೂ ಇಬ್ರಾಹಿಂ ಅಭಿಪ್ರಾಯಪಟ್ಟರು.

ಶಿವಮೊಗ್ಗದಲ್ಲಿ ಗಲಭೆ ಸಂದರ್ಭ ಆಸ್ತಿ-ಪಾಸ್ತಿ ಹಾನಿ ಮಾಡಲು ಪ್ರೇರಣೆ ನೀಡಿದ ನಾಯಕರ ಆಸ್ತಿಗಳನ್ನು ಸರ್ಕಾರ ಕೂಡಲೇ ಜಪ್ತಿ ಮಾಡಲಿ ಎಂದು ಒತ್ತಾಯಿಸಿದ ಇಬ್ರಾಹಿಂ ಹಿಜಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್ ಮುಖಂಡ ನಾಪಂಡ ಮುತ್ತಪ್ಪ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರೀಂ, ಮಡಿಕೇರಿಯ ಸುನಿಲ್, ಯೂಸುಫ್ ಕೊಂಡಂಗೇರಿ, ಮಡಿಕೇರಿ ನಗರಸಭೆ ಮುಸ್ತಪ್ಪ, ಸುಂಟಿಕೊಪ್ಪ ಜಮಾಹತ್ ಅಧ್ಯಕ್ಷ ಅಬ್ದುಲ್ಲಾ ಇದ್ದರು


Spread the love

About Laxminews 24x7

Check Also

ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು

Spread the loveಹಾವೇರಿ: 4 ತಿಂಗಳ ಹಿಂದೆ ನಿಧಿ ಆಸೆಗಾಗಿ ಕೋಣಕಲ್ಲು ಭರಮಪ್ಪ ದೇವರ ಕಲ್ಲನ್ನು ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ