ಕೊಪ್ಪಳ: ಕಾಂಗ್ರೆಸ್‍ನವರಿಗೆ ಕೆಲಸದ ಕೊರತೆ ಇದೆ, ಹಾಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರು ನೀರಾವರಿ ಮಂತ್ರಿಯಾಗಿದ್ದಾಗ ಕೆಲಸ ಮಾಡಲಿಲ್ಲ. ಈಗ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಮಹಾದಾಯಿ ವಿಚಾರದ ಬಗ್ಗೆ ಕಾಂಗ್ರೆಸ್‍ನವರು ನಮಗೆ ಹೇಳುವ ಅವಶ್ಯಕತೆಯಿಲ್ಲ. ಮಹಾದಾಯಿ ನಮ್ಮ ಬದ್ಧತೆಯಾಗಿದೆ. ಅದಕ್ಕಾಗಿ ನಾವು ಮಹಾದಾಯಿ ಕೆಲಸ ಮಾಡೇ ಮಾಡುತ್ತೇವೆ ಎಂದರು.
ಕಾಂಗ್ರೆಸ್‍ನವರಿಗೆ ಸ್ವಲ್ಪ ಬಿಪಿ, ಶುಗರ್ ಜಾಸ್ತಿಯಾಗಿದೆ. ನಾಲ್ಕು ವರ್ಷದಿಂದ ಕೂತಲ್ಲೇ ಕೂತಿದ್ದಾರೆ. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
Laxmi News 24×7