ಬೆಂಗಳೂರು: ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿಮಾನಿಗಳ ಜೊತೆಗೆ ಕೆಲವು ಸಮಯ ಕಳೆದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಕೊರೊನಾದಿಂದ ಬಹಳ ದಿನಗಳಿಂದ ಸುದೀಪ್ ಅವರು ಅಭಿನಿಗಳನ್ನ ಭೇಟಿ ಮಾಡಿರಲಿಲ್ಲ. ಇಂದು ಬೆಳಗ್ಗೆ ಮನೆ ಬಳಿ ಸೇರಿದ್ದರು. ಸೂಪರ್ ಸಂಡೇಯನ್ನು ಕಿಚ್ಚ ಅಭಿಮಾನಿಗಳ ಜೊತೆಗೆ ಕಳೆದಿದ್ದಾರೆ.
ಜೆ.ಪಿ ನಗರದ ಸುದೀಪ್ ಮನೆ ಮುಂದೆ ಸೇರಿದ ಕಿಚ್ಚನ ಅಭಿಮಾನಿಗಳು ಸೇರಿದ್ದರು. ಈ ವೇಳೆ ಸುದೀಪ್ ಅವರು ಫೋಟೋ ಕ್ಲಿಕಿಸಿಕೊಂಡು ಆಟೋ ಗ್ರಾಫ್ ಕೊಟ್ಟಿದ್ದಾರೆ. ಸುಮಾರು 11 ಗಂಟೆಗೆ ಮನೆಯಿಂದ ಹೊರಗೆ ಬಂದ ಕಿಚ್ಚ ಬಹಳ ಸಮಯ ಅಭಿಮಾನಿಗಳ ಜೊತೆ ಕಾಲ ಕಳೆದಿದ್ದಾರೆ. ಈ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Laxmi News 24×7