ಪಾಟ್ನಾ(ಬಿಹಾರ): ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಮಿರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ತಿಗೆಯೊಂದಿಗಿನ ಅಕ್ರಮ ಸಂಬಂಧವನ್ನು ವಿರೋಧಿಸಿದ ಪತ್ನಿಯ ತಲೆ ಕಡಿದು ಕೊಲೆ ಮಾಡಿದ್ದಲ್ಲದೇ, ಸಾಕ್ಷ್ಯ ನಾಶಪಡಿಸಲು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವ ಘಟನೆ ನಡೆದಿದೆ.
ಸಂಜು ದೇವಿ ಮೃತ ಮಹಿಳೆ. ಸಂಜು ದೇವಿಯನ್ನು ಮಿರ್‌ಗಂಜ್‌ನ ಕಾಸಿ ಸಮೈಲ್ ಗ್ರಾಮದಲ್ಲಿ ವಿಜಯ್ ಗೊಂಡ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಹೀಗಿದ್ದರೂ ಪತಿಯು ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಸಂಜು ಆಗಾಗ್ಗೆ ವಿರೋಧಿಸುತ್ತಿದ್ದಳು.
ಆದರೆ ಗಂಡನಿಗೆ ಅತ್ತಿಗೆಯ ಬಗ್ಗೆ ಒಂದು ಮಾತು ಕೇಳಲು ಇಷ್ಟವಿರಲಿಲ್ಲ. ಇದರಿಂದ ದಿನವೂ ಪತ್ನಿ ಸಂಜುಗೆ ಥಳಿಸುತ್ತಿದ್ದ. ಇದರಿಂದ ಕೋಪಗೊಂಡ ಸಂಜು ತನ್ನ ತಾಯಿಯ ಮನೆಗೆ ಹೋಗಿದ್ದಳು. ಅದೇ ವೇಳೆಗೆ ಪತಿ ಕರೆಸಿಕೊಂಡ ಸಂಜು ಫೆ.25ರಂದು ಅತ್ತೆ ಮನೆಯಿಂದ ಅತ್ತಿಗೆ ಮನೆಗೆ ಬಂದಿದ್ದಳು. ಅದೇ ರಾತ್ರಿ ಚಾಪಕಲ್ ಬಳಿ ನೀರು ತರಲು ಹೋದ ಸಂಜು ದೇವಿ ತಲೆ ಕಡಿದು ಪತಿ ಕೊಲೆ ಮಾಡಿದ. ನಂತರ ಕೊಲೆಗಾರ ಸಾಕ್ಷ್ಯ ನಾಶಪಡಿಸಲು ಪತ್ನಿಯ ಶವವನ್ನು ಹರಿತವಾದ ಆಯುಧದಿಂದ ಹಲವಾರು ತುಂಡುಗಳನ್ನಾಗಿ ಎಸೆದಿದ್ದಾನೆ.