Breaking News

ಇದೊಂದು ರೈಲ್ವೆ ಕ್ರಾಸಿಂಗ್​ನಲ್ಲಿ ಬರೀ ಕಚೋರಿಗಾಗಿ ರೈಲೇ ನಿಂತು ಬಿಡುತ್ತದೆ!

Spread the love

ನವದೆಹಲಿ: ಸಾಮಾನ್ಯವಾಗಿ ಒಮ್ಮೆ ಹೊರಟ ರೈಲು ನಿಗದಿತ ಸ್ಟೇಷನ್​ ಬಿಟ್ಟು ಬೇರೆಲ್ಲೂ ನಿಲ್ಲುವುದಿಲ್ಲ. ಅದು ಸಾಗುವ ಹಾದಿಯಲ್ಲಿ ಏನೇ ಎದುರಾದರೂ ಲೆಕ್ಕಿಸದೆ ಹೊಡೆದುಕೊಂಡು ಮುಂದಕ್ಕೆ ಹೋಗಿಬಿಡುತ್ತದೆ. ಆದರೆ ಇಲ್ಲೊಂದು ಕಡೆ ಕಚೋರಿಗೇ ರೈಲನ್ನು ನಿಲ್ಲಿಸುವ ತಾಕತ್ತಿದೆ.

ಅಂಥದ್ದೊಂದು ಇದೊಂದು ಪ್ರದೇಶದಲ್ಲಿ ನಿತ್ಯವೂ ಕಾಣಿಸುತ್ತದೆ.

ರಾಜಸ್ಥಾನದ ಆಲ್ವಾರ್​ನ ರೈಲ್ವೆ ಕ್ರಾಸಿಂಗ್​ನಲ್ಲಿ ಕಚೋರಿಗಾಗಿಯೇ ರೈಲು ಕ್ರಾಸಿಂಗ್​ನಲ್ಲಿ ನಿಲ್ಲುತ್ತದೆ. ಆಲ್ವಾರ್​ನ ದೌಡ್​ಪುರ್​ ರೈಲ್ವೆ ಕ್ರಾಸಿಂಗ್​ನಲ್ಲಿ ಇಂಥದ್ದೊಂದು ದೃಶ್ಯ ಸಾಮಾನ್ಯವಾಗಿ ಪ್ರತಿ ಮುಂಜಾನೆಯೂ ಕಾಣಸಿಗುತ್ತದೆ.

ಈ ರೈಲ್ವೆ ಕ್ರಾಸಿಂಗ್ ಬರುತ್ತಿದ್ದಂತೆ ಎರಡೂ ಕಡೆಯ ಗೇಟ್​ ಮುಚ್ಚಿಕೊಳ್ಳುತ್ತದೆ. ರೈಲು ನಿಧಾನವಾಗಿ ನಿಂತು ಬಿಡುತ್ತದೆ. ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯೊಬ್ಬ ರೈಲಿನ ಸಮೀಪ ಹೋಗಿ ರೈಲು ಚಾಲಕನಿಗೆ ಕಚೋರಿಯ ಪ್ಯಾಕೆಟ್​ ನೀಡುತ್ತಾನೆ.

ಪ್ರತಿನಿತ್ಯ 8 ಗಂಟೆ ಸುಮಾರಿಗೆ ಇಲ್ಲಿನ ರೈಲ್ವೆ ಕ್ರಾಸಿಂಗ್​ನಲ್ಲಿ ಈ ದೃಶ್ಯ ಸಾಮಾನ್ಯವಾಗಿ ಕಾಣಿಸುತ್ತದೆ. ಕ್ರಾಸಿಂಗ್ ಗೇಟ್​ನಲ್ಲಿನ ಸಿಬ್ಬಂದಿಯೊಬ್ಬ ಹತ್ತಿರದ ಅಂಗಡಿಯೊಂದರಿಂದ ಕಚೋರಿಯನ್ನು ಪಡೆದುಕೊಂಡು ಲೋಕೋ ಪೈಲಟ್​ (ರೈಲು ಚಾಲಕ)ಗೆ ನೀಡುತ್ತಾನೆ. ಈ ಚಾಲಕನ ಕಚೋರಿ ತಿನ್ನುವ ಆಸೆಯಿಂದಾಗಿ ನಿತ್ಯವೂ ಹಲವಾರು ಮಂದಿ ರೈಲ್ವೆ ಗೇಟ್​ ಬಳಿ ಕಾಯುವಂತಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜೈಪುರದ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ನರೇಂದ್ರ ಕುಮಾರ್ ಈ ಕುರಿತ ವಿಡಿಯೋ ಹಂಚಿಕೊಂಡಿದ್ದು, ಇಬ್ಬರು ಲೋಕೋ ಪೈಲಟ್​, ಇಬ್ಬರು ಗೇಟ್​ ಸಿಬ್ಬಂದಿ ಹಾಗೂ ಇನ್ನೊಬ್ಬ ಸೇರಿ ಐವರನ್ನು ಅಮಾನತು ಮಾಡಿದ್ದಾರೆ. ಚಾಲಕ ತನ್ನ ಇಷ್ಟ ಬಂದಹಾಗೆ ಅದೂ ಕಚೋರಿಯಂತಹ ಸಣ್ಣ ಸಂಗತಿಗಾಗಿ ರೈಲನ್ನು ಎಲ್ಲೆಂದರಲ್ಲಿ ನಿಲ್ಲಿಸುವಂತಿಲ್ಲ ಆಲ್ವಾರ್ ಸ್ಟೇಷನ್​ ಸೂಪರಿಂಟೆಂಡೆಂಟ್ ಆರ್.​ಎಲ್​. ಮೀನಾ ಹೇಳಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ.‌ ನಿರಂತರ ಮಳೆಯಿಂದ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.

Spread the love ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ