Breaking News

ಈ ಬಾರಿ ಪಾಶ್ಚಾತ್ಯ ಉಡುಗೆ ಧರಿಸಿ ಗಮನ ಸೆಳೆದ ಉತ್ತರ ಪ್ರದೇಶದ ಚುನಾವಣಾ ಅಧಿಕಾರಿ

Spread the love

Reena Dwivedi ಚುನಾವಣಾ ಮತಗಟ್ಟೆ ಅಧಿಕಾರಿ ರೀನಾ ದ್ವಿವೇದಿ ಅವರು ಕಳೆದ ಬಾರಿ ರಾತ್ರೋರಾತ್ರಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು. ಇದೀಗ2022 ರಲ್ಲಿ ಮತ್ತೊಮ್ಮೆ ಅವರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ಬಿಂದುವಾಗಿದ್ದಾರೆ.2017 ರ ವಿಧಾನಸಭೆ ಮತ್ತು 2019 ರ ಉತ್ತರ ಪ್ರದೇಶದ ಲೋಕಸಭೆ ಚುನಾವಣೆಯ ಸಮಯದಲ್ಲಿ ಲಖನೌದಲ್ಲಿ ಮತದಾನದ ಕರ್ತವ್ಯದ ಸಮಯದಲ್ಲಿ ಹಳದಿ ಸೀರೆ ಧರಿಸಿ ಸ್ಟೈಲಿಶ್ ಆಗಿ ಬಂದ ರೀನಾ ದ್ವಿವೇದಿಯ (Reena Dwivedi) ಫೋಟೊ ವೈರಲ್ ಆಗಿತ್ತು.

ಈಗ, ಅವರು ಬುಧವಾರ ನಡೆಯುತ್ತಿರುವಉತ್ತರ ಪ್ರದೇಶ ವಿಧಾನಸಭಾ ಚುನಾವಣೆ2022 ರ (UP Election) ನಾಲ್ಕನೇ ಹಂತದ ತಯಾರಿಯಲ್ಲಿದ್ದಾರೆ. ಬುಧವಾರ ನಡೆಯುತ್ತಿರುವ ನಾಲ್ಕನೇ ಹಂತದ ಮತದಾನದಲ್ಲಿ ರೀನಾ ಮೋಹನ್‌ಲಾಲ್‌ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ಮತಗಟ್ಟೆ ಅಧಿಕಾರಿ ರೀನಾ ದ್ವಿವೇದಿ ಅವರು ಕಳೆದ ಬಾರಿ ರಾತ್ರೋರಾತ್ರಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು. ಇದೀಗ2022 ರಲ್ಲಿ ಮತ್ತೊಮ್ಮೆ ಅವರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ಬಿಂದುವಾಗಿದ್ದಾರೆ. ರೀನಾ ದ್ವಿವೇದಿ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ರಲ್ಲಿ ಚುನಾವಣಾ ಅಧಿಕಾರಿಗಳಲ್ಲಿ ಒಬ್ಬರು. ಫೆಬ್ರವರಿ 22 ರಂದು (ಮಂಗಳವಾರ) ಅವರು ಸ್ಲೀವ್ ಲೆಸ್ ಕಪ್ಪು ಟಾಪ್ ಮತ್ತು ಬೀಜ್ ಹೈ ವೇಸ್ಟ್ ಪ್ಯಾಂಟ್‌ ಧರಿಸಿ ಮೋಹನ್‌ಲಾಲ್‌ಗಂಜ್ ಮತಗಟ್ಟೆಗೆ ಆಗಮಿಸಿದರು. ಲಖನೌದ ಗೋಸೈಗಂಜ್ ಬೂತ್ ಸಂಖ್ಯೆ 114 ರ ಬಸ್ತಿಯಾದಲ್ಲಿನ ಮತದಾನ ಕೇಂದ್ರಕ್ಕೆ ಆಗಮಿಸುತ್ತಿದ್ದಾಗ ಮಾಧ್ಯಮಗಳು ಮತ್ತು ಅಭಿಮಾನಿಗಳು ಅವರ ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ. 2017ರ ಉತ್ತರ ಪ್ರದೇಶ ಚುನಾವಣೆಯಲ್ಲೂ ದ್ವಿವೇದಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು.

2019 ರಲ್ಲಿ ಹಳದಿ ಸೀರೆ ಧರಿಸಿ ಬಂದಿದ್ದ ಪಿಡಬ್ಲ್ಯುಡಿ ಅಧಿಕಾರಿಯ ಛಾಯಾಚಿತ್ರವನ್ನು ಚುನಾವಣಾ ಕರ್ತವ್ಯದಲ್ಲಿದ್ದಾಗ ಸಹೋದ್ಯೋಗಿಯೊಬ್ಬರು ಕ್ಲಿಕ್ ಮಾಡಿದ್ದಾರೆ. 


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ