ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಂಗ ನಿಂದನೆ ಬರಹ ಪ್ರಕಟಿಸಿ ಜನರನ್ನು ಪ್ರಚೋದಿಸಿದ ಆರೋಪದಡಿ ಸ್ಯಾಂಡಲ್ವುಡ್ ನಟ ಚೇತನ್ ನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೇತನ್ ಕುಮಾರ್ ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಪದೇ ಪದೇ ಟ್ವೀಟ್ ಮಾಡಿದ ನಂತರ ಸುಮೋಟೋ ಪ್ರಕರಣ ದಾಖಲಿಸಲಾಗಿದೆ ಎಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ವಿಚಾರಣೆ ನಡೆಸಿದ 8 ನೇ ಎಸಿಎಂಎಂ ಕೋರ್ಟ್ ನಟ ಚೇತನ್ ರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.ಬೆಂಗಳೂರು ನ್ಯಾಯಾಧೀಶರನ್ನು ನಿಂಧಿಸಿದಂತ ಪ್ರಕರಣ ಸಂಬಂಧ ನಟ ಚೇತನ್ ಅವರನ್ನು ಶೇಷಾದ್ರಿಪುಂರ ಪೊಲೀಸರು ವಶಕ್ಕೆ ಪಡೆದಿದ್ದರು.
Laxmi News 24×7