Breaking News

ರಾಜ್ಯ ಬಜೆಟ್’ ಮಂಡನೆಗೆ ಮುಹೂರ್ತ ಫಿಕ್ಸ್: ‘ಮಾ.4ಕ್ಕೆ ಬಜೆಟ್ ಮಂಡನೆ’ : ಸಿಎಂ ಬಸವರಾಜ ಬೊಮ್ಮಾಯಿ

Spread the love

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದಂತ ರಾಜ್ಯ ಬಜೆಟ್ ಮಂಡನೆಗೆ ( Karnataka Budget 2022 ) ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್ ಗದ್ದಲದ ನಡುವೆಯೂ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಮಾರ್ಚ್ 4ಕ್ಕೆ ರಾಜ್ಯ ಬಜೆಟ್ ಮಂಡಿಸೋದಾಗಿ ಘೋಷಣೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಕಾಂಗ್ರೆಸ್ ಕೈವಾಡವಿದೆ ಎಂಬುದಾಗಿ ಆರೋಪಿಸಿದಂತ ಬಿಜೆಪಿ ನಾಯಕರ ವಿರುದ್ಧ ಸದನದಲ್ಲಿ ಭಾವಿಗಿಳಿದು ಕಾಂಗ್ರೆಸ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ತನಿಖೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.

ಈ ಮಧ್ಯ ಸದನದಲ್ಲಿ ಮಾತನಾಡಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾರ್ಚ್.4ರಂದು ರಾಜ್ಯ ಬಜೆಟ್ ಮಂಡಿಸೋದಾಗಿ ಸ್ಪೀಕರ್ ಅನುಮತಿಯನ್ನು ಕೋರಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ, ಕಾಂಗ್ರೆಸ್ ಸದಸ್ಯರ ಗದ್ದಲ-ಕೋಲಾಹಲದಿಂದಾಗಿ ವಿಧಾನಸಭೆಯನ್ನು ಮಾರ್ಚ್ 4ರವರೆಗೆ ಮುಂದೂಡಿಕೆ ಮಾಡಿದರು.


Spread the love

About Laxminews 24x7

Check Also

ಸಿಎಂ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದವರೇ ವಿಶ್ವಾಸ ಕಳೆದುಕೊಂಡಿದ್ದಾರೆ: ಬಿ ವೈ ವಿಜಯೇಂದ್ರ

Spread the loveಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದ ಶಾಸಕರುಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ