ಮನೆಯಲ್ಲಿದ್ದ ಚೇತನ್ ಅವರನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘಾ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ. ಮನೆಯಲ್ಲಿದ್ದವರು ಏಕಾಏಕಿ ಕಾಣಿಸದೇ ಇದ್ದಾಗ, ನಾನು ಮನೆಯಲ್ಲಾ ಹುಡುಕಿದೆ, ಚೇತನ್ ಎಲ್ಲಿ ಎಂದು ಅಲ್ಲೇ ಇದ್ದವರನ್ನು ಕೇಳಿದಾಗ ಪೊಲೀಸ್ ನವರು ಕರೆದುಕೊಂಡು ಹೋದರು ಎಂದು ಹೇಳಿದರು. ನಾನು ಶೇಷಾದ್ರಿಪುರಂ ಪೊಲೀಸ್ ಠಾಣೆಯನ್ನು ಸಂಪರ್ಕ ಮಾಡಿದೆ. ಅವರಿಂದ ಸಕಾರಾತ್ಮಕವಾಗಿ ಉತ್ತರ ಸಿಗುತ್ತಿಲ್ಲ. ಅವರು ಅರೆಸ್ಟ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಚೇತನ್ ಮತ್ತು ಅವರ ಅಂಗರಕ್ಷಕರ ಫೋನ್ ಕರೆ ಕೂಡ ಸಿಗುತ್ತಿಲ್ಲ. ನಿಜ ಅರ್ಥದಲ್ಲಿ ನನ್ನ ಪತಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಮೇಘಾ ಆರೋಪ ಮಾಡಿದ್ದಾರೆ.
ಪೊಲೀಸ್ ನವರು ಅವರನ್ನು ಬಂಧಿಸಿದ್ದರೆ, ಯಾವ ಕಾರಣಕ್ಕಾಗಿ ಎನ್ನುವುದನ್ನು ಸ್ಪಷ್ಟಪಡಿಸಬೇಕಿತ್ತು. ಅಥವಾ ಮನೆಯವರಿಗೆ ಮಾಹಿತಿ ನೀಡಬೇಕಿತ್ತು. ಯಾವುದೇ ನೋಟಿಸ್ ನೀಡದೇ, ಮನೆಯವರಿಗೂ ಮಾಹಿತಿ ಕೊಡದೇ ಏಕಾಏಕಿ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ನವರ ಕಸ್ಟಡಿಯಲ್ಲಿ ನನ್ನ ಪತಿ ಇಲ್ಲದೇ ಇದ್ದರೆ, ಅವರನ್ನು ಕಿಡ್ನ್ಯಾಪ್ ಮಾಡಿದ್ದು ಯಾರು ಎಂದಾದರೂ ಗೊತ್ತಾಗಬೇಕಿದೆ ಎಂದಿದ್ದಾರೆ ಮೇಘಾ.