ಚಿರತೆ ಮತ್ತು ನಾಯಿ ಕಾಳಗವಾದರೆ ಯಾವುದು ಮೇಲುಗೈ ಸಾಧಿಸಬಹುದು ಅಥವಾ ವಾಸ್ತವವಾಗಿ ಹೇಳಬೇಕೆಂದರೆ ಯಾವ ಪ್ರಾಣಿ ಬದುಕುಳಿಯಬಹುದು. ಈ ಪ್ರಶ್ನೆಗೆ ತಕ್ಷಣದ ಉತ್ತರ ಚಿರತೆ. ಆದರೆ ಇತ್ತೀಚಿಗೆ ರಾಜಸ್ಥಾನದ ವನ್ಯಜೀವಿ ಸಫಾರಿ ಪಾರ್ಕ್ ನಲ್ಲಿ ಇದರ ತದ್ವಿರುದ್ಧ ಘಟನೆ ನಡೆದಿದೆ.
ಚಿರತೆಯೊಂದನ್ನು, ದಿಟ್ಟ ನಾಯಿ ದೈರ್ಯವಾಗಿ ಎದುರಿಸಿದೆ. ಸಧ್ಯ ಈ ದಿಟ್ಟ ನಾಯಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ನಡುರಸ್ತೆಯಲ್ಲಿಯೇ ನಾಯಿಯೊಂದು ಮಲಗಿರುವುದನ್ನು ನೀವು ಗಮನಿಸಬಹುದು. ಇದೇ ವೇಳೆ ಕಾಡಿನಿಂದ ರಸ್ತೆಗೆ ಎಂಟ್ರಿ ನೀಡಿರುವ ಚಿರತೆಯೊಂದು ಅಲ್ಲಿಗೆ ಬಂದು ನಾಯಿಯನ್ನು ಮೂಸಲು ಆರಂಭಿಸುತ್ತದೆ. ಇದರಿಂದ ಗಲಿಬಿಲಿಗೊಂಡ ನಾಯಿ ಒಮ್ಮೆಲೇ ಎದ್ದು ನಿಂತು ಜೋರಾಗಿ ಬೊಗಳಲು ಪ್ರಾರಂಭಿಸುತ್ತದೆ. ಇದರಿಂದ ಗಾಬರಿಗೊಂಡ ಚಿರತೆ ಹಿಂದೇಟು ಹಾಕಿ ಮರಳಿ ಅರಣ್ಯ ಸೇರುತ್ತದೆ.