Breaking News

ಗೋಕಾಕ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಬಾಡಿಗೆ ನೀಡಿದ್ದ ಮಲಿಕಾನಿಂದ ಯುವತಿಗೆ ಆತ್ಯಚಾರ ವೆಸಗಿ ಮೋಸ..

Spread the love

ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಎಂದು ಯುವಕನ ವಿರುದ್ಧ ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣಾ ಮೆಟ್ಟಿಲೇರಿಸಿದ್ದಾಳೆ.

ಬೆಳಗಾವಿ ಜಿಲ್ಲೆ ಗೋಕಾಕ್‍ನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ವಸತಿ ನಿಲಯ ಬಾಡಿಗೆ ನೀಡಿದ್ದ ಕಟ್ಟಡ ಮಾಲೀಕನ ಪುತ್ರ ಆದರ್ಶ ಮಾಲದಿನ್ನಿ 2016ರ ಡಿಸೆಂಬರ್ 5ರಂದು ಅತ್ಯಾಚಾರವೆಸಗಿ, ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಇದಾದ ಬಳಿಕ ಈ ಸಂಬಂಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಮುಂದಾದಾಗ ಮದುವೆಯಾಗುತ್ತೇನೆ ಎಂದು ತನ್ನನ್ನು ನಂಬಿಸಿದ್ದನು. ಆದರೆ ಇದೀಗ ತನಗೆ ಮೋಸ ಮಾಡಿ ಬೇರೆ ಯುವತಿ ಜೊತೆ ಗೋಕಾಕ್‍ನಲ್ಲಿ ಮದುವೆಯಾಗಲು ಮುಂದಾಗಿದ್ದಾನೆ ಎಂದು ಯುವತಿ ತನ್ನ ಅಳಲನ್ನು ತೊಡಿಕೊಂಡಿದ್ದಾಳೆ.

ಈ ವಿಚಾರವಾಗಿ ಆದರ್ಶ್ ತಂದೆ, ತಾಯಿಗೆ ಹೇಳಿದರೂ ಹಣದ ಆಮಿಷ ತೋರಿಸಿ ನಂತರ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಯುವತಿ ಇದೀಗ ನ್ಯಾಯಕ್ಕಾಗಿ ಆಗ್ರಹಿಸಿ ಬೆಳಗಾವಿ ಎಸ್‍ಪಿ ಮೊರೆ ಹೋಗಿದ್ದಾಳೆ.

 


Spread the love

About Laxminews 24x7

Check Also

ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಆನಂದ್ ನಗರದಲ್ಲಿ ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎನ್.ಸಿ.ಡಿ.ಎಫ್.ಐ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ ಕೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ