Breaking News

ಶಿವಕುಮಾರ್ ಗೂಂಡಾ, ಸಿದ್ದರಾಮಯ್ಯ ಜಾತಿವಾದಿ: ಈಶ್ವರಪ್ಪ ವಾಗ್ದಾಳಿ

Spread the love

ಶಿವಮೊಗ್ಗ : ‘ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡಿದರೆ ಗೂಂಡಾ ಡಿ.ಕೆ.ಶಿವಕುಮಾರ್, ಜಾತಿವಾದಿ ಸಿದ್ದರಾಮಯ್ಯ ಬಂದರೂ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.

ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಶನಿವಾರ ಭದ್ರಾವತಿ ಕ್ಷೇತ್ರದ ಜೆಡಿಎಸ್‌ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು, ‘ಜಾತಿ ಕುಲದ ಲೆಕ್ಕಾಚಾರ ಬದಿಗಿಟ್ಟು ಕೆಲಸ ಮಾಡಬೇಕು. ಲಿಂಗಾಯತರು, ಒಕ್ಕಲಿಗರು ಎನ್ನುತ್ತಾ ಜಾತಿಯ ಲೆಕ್ಕಾಚಾರಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಹೇಳಿದರು.

‘ಎಲ್ಲರೂ ಹಿಂದೂಗಳು, ಹಿಂದುತ್ವ ಗೆಲ್ಲಿಸುತ್ತೇವೆ ಎನ್ನುಬೇಕು. ರಾಷ್ಟ್ರೀಯ ವಿಚಾರಗಳನ್ನು ಇಟ್ಟುಕೊಂಡೇ ಸದಾ ಮುನ್ನಡೆಯಬೇಕು. ಆಗ ಜನರೇ ಗೂಂಡಾ, ಜಾತಿವಾದಿಗಳನ್ನು ಪಕ್ಕಕ್ಕೆ ಸರಿಸುತ್ತಾರೆ’ ಎಂದು ಕರೆ ನೀಡಿದರು.


Spread the love

About Laxminews 24x7

Check Also

ಆಲ್ಕೋಮೀಟರ್ಗಳ ಖಚಿತತೆ ಕುರಿತು ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

Spread the loveಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪರೀಕ್ಷಿಸುವ ಬ್ರೀತ್ ಅನಲೈಸರ್ಗಳು(ಆಲ್ಕೋ ಮೀಟರ್) ದೋಷರಹಿತವಾಗಿವೆ ಎಂಬುದಾಗಿ ಖಚಿತ ಪಡಿಸುವಿರಾ? ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ