ವಾಷಿಂಗ್ಟನ್: ಜರ್ಮನಿಂದ ಅಮೆರಿಕದ ರೋಹಿಡೆ ದ್ವೀಪಕ್ಕೆ ಐಷಾ ರಾಮಿ ಕಾರುಗಳನ್ನು ಕೊಂಡೊಯ್ಯುತ್ತಿದ್ದ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಶಾಂತಿ ಸಾಗರ ವ್ಯಾಪ್ತಿಯ ಅಜೋರ್ಸ್ ದ್ವೀಪದ ಸಮೀಪ ಸಂಭವಿಸಿದೆ. ಇದರಿಂದಾಗಿ ಅದರಲ್ಲಿದ್ದ ಪೋರ್ಶೆ, ಲ್ಯಾಂಬೊ ರ್ಗಿನಿ, ಆಡಿ ಸೇರಿದಂತೆ 4 ಸಾವಿರ ದುಬಾರಿ ಕಾರುಗಳು ಬೆಂಕಿಗೆ ಆಹುತಿಯಾಗಿವೆ.
ಹಡಗಿನಲ್ಲಿದ್ದ 22 ಸಿಬಂದಿಯನ್ನು ಪೋರ್ಚುಗಲ್‌ನ ನೌಕಾಪಡೆ ಮತ್ತು ವಾಯುಪಡೆ ಸಿಬಂದಿ ರಕ್ಷಿಸಿದ್ದಾರೆ. 650 ಅಡಿ ಉದ್ದದ ಹಡಗು ಜರ್ಮನಿಂದ ಫೆ.10ಕ್ಕೆ ಪ್ರಯಾಣ ಶುರು ಮಾಡಿತ್ತು.
ಅದರಲ್ಲಿ ಫೋಕ್ಸ್‌ವ್ಯಾಗನ್ ಕಂಪೆನಿಯ ಲ್ಯಾಂಬೋರ್ಗಿನಿ, ಆಡಿ ಸೇರಿ 3,965 ಕಾರುಗಳಿದ್ದವು. ಯಾವ ಕಾರಣ ದಿಂದಾಗಿ ಬೆಂಕಿ ಉಂಟಾಗಿದೆ ಎಂಬುದು ಗೊತ್ತಾಗಿಲ್ಲ.
ಈ ಹಡಗು ಫೆ.23ರಂದು ಅಮೆರಿಕದ ರೋಹಿಡೆ ದ್ವೀಪಕ್ಕೆ ತಲುಪಬೇಕಾಗಿತ್ತು. 2019ರಲ್ಲಿ ಕೂಡ ಹಡಗಿನಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಆಡಿ, ಪೋರ್ಶ್ ಸೇರಿದಂತೆ ವೈಭವೋಪೇತ 2 ಸಾವಿರ ಕಾರುಗಳು ಸುಟ್ಟು ಹೋಗಿದ್ದವು.