Breaking News

ಕುಡಿತದ ಚಟ.. ಸ್ವಂತ ಮಗಳ ಮೇಲಿನ ಅತ್ಯಾಚಾರಕ್ಕೆ ಸಾಥ್​ ನೀಡಿದ ತಾಯಿ:

Spread the love

ಆನೇಕಲ್ : ಕಟ್ಟಿಕೊಂಡ ಸಂಸಾರವನ್ನು ತ್ಯಜಿಸಿ ಗಂಡನಿಲ್ಲದ ಮಹಿಳೆಯ ಸಹವಾಸ ಮಾಡಿ, ಕುಡಿದ ಮತ್ತಿನಲ್ಲಿ ಆಕೆಯ ಮಗಳನ್ನು ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು, ಮತ್ತು ಅವನಿಗೆ ಸಹಕಾರ ನೀಡಿದ್ದ ಬಾಲಕಿಯ ತಾಯಿಯನ್ನ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಮೆಹೆಂದಿಪುರ ಮೂಲದ ಮೋಹನ್ ಆಸ್ದಾ ಚೋಟಾ (47), ಹಾಗೂ ತಿಮಲ್ಲಿ ಮೂಲದ ಸೊಂಬರಿ ಮುರುಮು ( 46 ) ಬಂಧಿತ ಆರೋಪಿಗಳು. ಇವರು ಎರಡು ವರ್ಷಗಳ ನಂತರ ಪೊಲೀಸ್​​ ಬಲೆಗೆ ಬಿದ್ದಿದ್ದಾರೆ. ಕಳೆದ ಆರು ವರ್ಷಗಳಿಂದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಬಳ್ಖೂರಿನಲ್ಲಿ ಮುರುಮು ತನ್ನ 16 ವರ್ಷದ ಮಗಳೊಂದಿಗೆ ವಾಸವಿದ್ದಳು.

ಮುರುಮು ಗಂಡ ಸಾವನ್ನಪ್ಪಿದ್ದ. ಮೋಹನ್ ತನ್ನ ಅನೂನ್ಯ ಕುಟುಂಬವನ್ನು ಬಿಟ್ಟು ಮುರುಮುವಿನ ಸಂಗ ಬೆಳೆಸಿದ್ದ. ಚಿಕ್ಕ ಬಾಡಿಗೆ ಮನೆಯ ಕೊಠಡಿಯಲ್ಲಿ ಮೂವರು ವಾಸವಿದ್ದರು. ಮುರುಮು ಮತ್ತು ಮೋಹನ್​​ಗೆ ವಿಪರೀತ ಕುಡಿತದ ಚಟವಿತ್ತು. ಒಂದು ದಿನ ಮುರುಮು ಕುಡಿದ ಮತ್ತಿನಲ್ಲಿ ಮಲಗಿರುವ ಸಂದರ್ಭದಲ್ಲಿ, ಮೋಹನ್ ಆಕೆಯ ಮಗಳ ಮೇಲೆ ಅತ್ಯಾಚಾರವೆಸಗಿ, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಇದನ್ನು ಹುಡುಗಿ ತನ್ನ ತಾಯಿ ಬಳಿ ಹೇಳಿದ್ದಳು. ಆದರೆ ತಾಯಿ ಮೋಹನ್​ಗೆ ಸಹಕರಿಸಿದ್ದಳು.


Spread the love

About Laxminews 24x7

Check Also

ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು

Spread the loveಹಾವೇರಿ: 4 ತಿಂಗಳ ಹಿಂದೆ ನಿಧಿ ಆಸೆಗಾಗಿ ಕೋಣಕಲ್ಲು ಭರಮಪ್ಪ ದೇವರ ಕಲ್ಲನ್ನು ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ