Breaking News

ವಾಟ್ಸ್‌ಆಯಪ್‌, ಮೆಸೇಂಜರ್‌ನಲ್ಲಿ ಹಾರ್ಟ್‌ ಇಮೋಜಿ ಕಳುಹಿಸಿದರೆ ಜೈಲು ಶಿಕ್ಷೆ, 20 ಲಕ್ಷ ದಂಡ

Spread the love

ಸೌದಿ : ವಾಟ್ಸ್‌ಆಯಪ್‌, ಮೆಸೇಂಜರ್‌ ಬಂದ ಮೇಲೆ ಒಂದು ವಾಕ್ಯವನ್ನು ಒಂದೇ ಇಮೋಜಿಯಲ್ಲಿ ಹೇಳಬಹುದಾಗಿದೆ. ಬೇಸರ, ನೋವು, ಕಷ್ಟ, ಖುಷಿ, ದುಃಖ, ಆಶ್ಚರ್ಯ, ಪ್ರೀತಿ, ಪೇಚು. ಹೀಗೆ ಒಂದಾ ಎರಡಾ? ಎಲ್ಲಾ ಭಾವನೆಗಳಿಗೂ ಈಗ ಒಂದೇ ಒಂದು ಇಮೋಜಿ ಸಾಕು.

 

ಅದರಲ್ಲಿಯೂ ಸ್ನೇಹಿತರ ನಡುವೆ ಹೆಚ್ಚಾಗಿ ಶೇರ್‌ ಆಗುವ ಇಮೋಜಿ ಎಂದರೆ ಲವ್‌ ಇಮೋಜಿ. ಅದು ಪ್ರೇಮಿಗಳೇ ಆಗಿರಬೇಕೆಂದೇನೂ ಇಲ್ಲ. ತಮ್ಮ ಇಷ್ಟದವರು ಏನಾದರೂ ಒಳ್ಳೊಳ್ಳೆ ಇಷ್ಟವಾಗುವ ಸುದ್ದಿ ಅಥವಾ ಫೋಟೋ ಕಳುಹಿಸಿದಾಗ ಹಾರ್ಟ್‌ ಇಮೋಜಿ ಬಹಳ ಉಪಯೋಗ ಮಾಡುವುದು ಇದೆ.

ಆದರೆ ಇದೀಗ ಈ ಇಮೋಜಿ ಮೇಲೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಮೆಸೇಂಜರ್‌, ವಾಟ್ಸ್‌ಆಯಪ್‌ನಲ್ಲಿ ಹೃದಯ ಈ ಹಾರ್ಟ್‌ ಇಮೋಜಿ ಬಳಸಿದರೆ ಜೈಲು ಶಿಕ್ಷೆಯ ಜತೆಗೆ 20 ಲಕ್ಷ ರೂಪಾಯಿವರೆಗೆ ದಂಡವೂ ಇರಲಿದೆ.

ಹಾಗೆಂದು ಭಾರತೀಯರು ಹೆದರಬೇಕಿಲ್ಲ. ಏಕೆಂದರೆ ಇಂಥದ್ದೊಂದು ವಿಚಿತ್ರ ಕಾನೂನು ಜಾರಿ ಮಾಡಿರುವುದು ಸೌದಿ ಅರೇಬಿಯಾದಲ್ಲಿ. ಯಾರಿಗಾದರೂ ಕೆಂಪು ಹೃದಯದ ಇಮೋಜಿ ಕಳುಹಿಸಿ ತಪ್ಪಿತಸ್ಥರೆಂದು ಸಾಬೀತಾದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಕಳುಹಿಸುವವರಿಗೆ ಒಂದು ಲಕ್ಷ ಸೌದಿ ರಿಯಾಲ್ ದಂಡ (ಸುಮಾರು 20 ಲಕ್ಷ ರೂಪಾಯಿ) ವಿಧಿಸಬಹುದು.

ಸೌದಿ ಅರೇಬಿಯಾದ ಆಯಂಟಿ ಫ್ರಾಡ್ ಅಸೋಸಿಯೇಶನ್‌ ಈ ಕುರಿತು ಆದೇಶ ಹೊರಡಿಸಿದೆ. ಕೆಂಪು ಹೃದಯದ ಇಮೋಜಿಯನ್ನು ಕಳುಹಿಸುವುದು ಅಪರಾಧವಾಗಿದೆ. ಆನ್‌ಲೈನ್ ಚಾಟಿಂಗ್ ಸಮಯದಲ್ಲಿ ಸ್ವೀಕರಿಸುವವರು ಚಿತ್ರ ಅಥವಾ ಇಮೋಜಿಯೊಂದಿಗೆ ಪ್ರಕರಣವನ್ನು ದಾಖಲಿಸಿದರೆ, ಈ ಕಿರುಕುಳವು ಅಪರಾಧದ ವರ್ಗಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. 


Spread the love

About Laxminews 24x7

Check Also

ನಿಯಮ ಉಲ್ಲಂಘಿಸಿ ಶಾಸಕ ವೀರೇಂದ್ರ ಬಂಧನ-ವಕೀಲರ ವಾದ: ವಿಚಾರಣೆ ಮುಂದೂಡಿಕೆ

Spread the love ಬೆಂಗಳೂರು: ಆನ್​ಲೈನ್​ ಮತ್ತು ಆಫ್​ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಮನ್ಸ್ ಜಾರಿಗೊಳಿಸದೆ, ನಿಯಮಗಳನ್ನು ಉಲ್ಲಂಘಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ