ಚಿತ್ರದುರ್ಗ): ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಲು ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಲ್ಲಿನ ತರಳಬಾಳು ಮಠದ ಆವರಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಅಂತಿಮ ದಿನದಂದು ನಡೆದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸದ್ಧರ್ಮ ಸಿಂಹಾಸನಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಉನ್ನತ ಸಮಿತಿ ಭದ್ರಾ ಮೇಲ್ದಂಡೆಗೆ ಸಮ್ಮತಿ ನೀಡಿದೆ. ಇದು ರಾಜ್ಯದ ಮೊದಲ ರಾಷ್ಟ್ರೀಯ ಜಲಯೋಜನೆಯಾಗಿದೆ. ಇದರಿಂದ ₹ 12,500 ಕೋಟಿ ನೆರವು ಕರ್ನಾಟಕಕ್ಕೆ ಸಿಗಲಿದೆ. ಯೋಜನೆ ಅನುಷ್ಠಾನ ಇನ್ನಷ್ಟು ಚುರುಕು ಪಡೆಯಲಿದೆ’ ಎಂದು ಹೇಳಿದರು.
Laxmi News 24×7