Breaking News

ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿ

Spread the love

ಥಾಣೆ( ಮಹಾರಾಷ್ಟ್ರ): ಕಾಡಿನಿಂದ ನಾಡಿಗೆ ಬಂದ ಚಿರತೆ ಮರಿಯೊಂದು ನೀರು ಕುಡಿಯಲು ಹೋಗಿ ಪ್ಲಾಸ್ಟಿಕ್​ ನೀರಿನ ಕೊಡದಲ್ಲಿ ತೆಲೆ ಸಿಕ್ಕಿಸಿಕೊಂಡು ಪರದಾಡಿದ ಘಟನೆ ಬದ್ಲಾಪುರ – ಕರ್ಜಾತ್ ರಸ್ತೆಯ ಗೋರೆಗಾಂವ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಚಿರತೆ ಮರಿ ಹೀಗೆ ತಲೆಯನ್ನು ಸಿಕ್ಕಿಸಿಕೊಂಡು ಒದ್ದಾಡುವ ಪರಿಯನ್ನ ನೋಡಿದ ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಚಿರತೆಯನ್ನ ಹಿಡಿದು ಪ್ಲಾಸ್ಟಿಕ್​ ಕೊಡವನ್ನು ಕತ್ತರಿಸಿ ತೆಗೆದಿದ್ದಾರೆ. ನಂತರ ಚಿರತೆ ಮರಿಗೆ ಸಣ್ಣ ಪುಟ್ಟ ಗಾಯಗಾಳಿಗಿದ್ದು, ಚಿಕಿತ್ಸೆ ನೀಡಿ ಕಾಡಿಗೆ ಮರಳಿ ಬಿಟ್ಟಿದ್ದಾರೆ.

ಮೂರು ದಿನಗಳ ಹಿಂದೆ ಚಿರತೆ ರಾತ್ರಿ ನೀರು ಕುಡಿಯಲು ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೂರು ದಿನಗಳಿಂದ ಚಿರತೆ ಪ್ಲಾಸ್ಟಿಕ್​​ ಕೊಡವನ್ನು ಹಾಗೇ ಇಟ್ಟುಕೊಂಡು ನರಾಳಿಡಿದೆ. ಮೂರು ದಿನದ ಹಿಂದೆ ರಸ್ತೆ ಮಧ್ಯದಲ್ಲೇ ಚಿರತೆ ನರಳಾಡುತ್ತಿದ್ದು, ಆ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಚಿರತೆಯ ವಿಡಿಯೋ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿದ್ದರು.

ಇದಾದ ಬಳಿಕ ಈ ವಿಡಿಯೋ ಆಧರಿಸಿ ನಿನ್ನೆ ರಾತ್ರಿಯಿಂದ ಚಿರತೆಗಾಗಿ ಹುಡುಕಾಟ ಆರಂಭಿಸಿದ್ದು, ಕೊನೆಗೂ 3 ದಿನಗಳ ಶೋಧ ಕಾರ್ಯಾಚರಣೆ ಬಳಿಕ ಬದ್ಲಾಪುರ ಸಮೀಪದ ಗೋರೆಗಾಂವ್ ಅರಣ್ಯ ಪ್ರದೇಶದಲ್ಲಿ ಚಿರತೆ ಸಿಕ್ಕಿದ್ದು, ಗ್ರಾಮಸ್ಥರ ಸಹಾಯದಿಂದ ಅಧಿಕಾರಿಗಳು ಚಿಕಿತ್ಸೆ ನೀಡಿ ನಂತರ ಕಾಡಿಗೆ ಮರಳಿ ಬಿಟ್ಟಿದ್ದಾರೆ.


Spread the love

About Laxminews 24x7

Check Also

ನಿಯಮ ಉಲ್ಲಂಘಿಸಿ ಶಾಸಕ ವೀರೇಂದ್ರ ಬಂಧನ-ವಕೀಲರ ವಾದ: ವಿಚಾರಣೆ ಮುಂದೂಡಿಕೆ

Spread the love ಬೆಂಗಳೂರು: ಆನ್​ಲೈನ್​ ಮತ್ತು ಆಫ್​ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಮನ್ಸ್ ಜಾರಿಗೊಳಿಸದೆ, ನಿಯಮಗಳನ್ನು ಉಲ್ಲಂಘಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ