Breaking News

BJP&RSS ಈ ದೇಶದ ಸಂವಿಧಾನವನ್ನಾಗಲಿ, ರಾಷ್ಟ್ರಧ್ವಜವನ್ನಾಗಲಿ ಎಂದೂ ಒಪ್ಪಿಕೊಂಡಿಲ್ಲ: ಸಿದ್ದರಾಮಯ್ಯ

Spread the love

ಬೆಂಗಳೂರು: ಇಂದು ವಿಧಾನ ಸಭಾ ಕಲಾಪದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ಬಿಗ್ ಪೈಟ್ ನಡೆದಿದೆ. ಸಚಿವ ಈಶ್ವರಪ್ಪ ನಿವಾಸಕ್ಕೆ ಯೂತ್ ಕಾಂಗ್ರೆಸ್ ಮುತ್ತಿಗೆ ಹಾಕಿದ್ದು, ಸರ್ಕಾರಿ ನಿವಾಸದೆದುರು ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಈ ದೇಶದ ಸಂವಿಧಾನವನ್ನಾಗಲಿ, ರಾಷ್ಟ್ರಧ್ವಜವನ್ನಾಗಲಿ ಹೃತ್ಪೂರ್ವಕವಾಗಿ ಎಂದೂ ಒಪ್ಪಿಕೊಂಡಿಲ್ಲ. ದೇವರು, ಧರ್ಮ, ದೇಶಪ್ರೇಮ, ರಾಷ್ಟಧ್ವಜ, ರಾಷ್ಟ್ರಗೀತೆ ಎಲ್ಲವೂ ಬೆಜೆಪಿ ರಾಜಕೀಯದ ಅಸ್ತ್ರಗಳು. ಸಂವಿಧಾನ ಮತ್ತು ರಾಷ್ಟ್ರಧ್ವಜದ ವಿರುದ್ಧ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಸಚಿವ ಈಶ್ವರಪ್ಪನವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಅಲ್ಲ. ತಮ್ಮ ಬಿಜೆಪಿ ಪಕ್ಷ ಮತ್ತು ಪರಿವಾರದ ಅಭಿಪ್ರಾಯವನ್ನೇ ಅವರು ಹೇಳಿದ್ದಾರೆ. ಅಂತರಂಗದಲ್ಲಿ ಪ್ರಧಾನಿ ಹಿಡಿದು ಆರ್‍ಎಸ್‍ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ವರೆಗೆ ಎಲ್ಲರ ಅಭಿಪ್ರಾಯವೂ ಇದೇ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.

https://twitter.com/narendramodi?ref_src=twsrc%5Etfw%7Ctwcamp%5Etweetembed%7Ctwterm%5E1493962946929516544%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fsiddaramaiah-said-an-fir-has-to-be-filed-against-the-traitor-k-s-eshwarappa%2F

 

ರಾಷ್ಟ್ರಧ್ವಜ, ರಾಷ್ಟ್ರ ಗೀತೆ ಮತ್ತು ಸಂವಿಧಾನ ರಾಷ್ಟ್ರದ ಪ್ರಮುಖ ಸಂಕೇತಗಳು, ರಾಜರ ಕಾಲದಲ್ಲಿ ಬೆಳ್ಗೊಡೆ ಮತ್ತು ಸಿಂಹಾಸನಗಳು ರಾಜ ಪ್ರಭುತ್ವಗಳ ಲಾಂಛನಗಳಾದರೆ ಹೊಸ ರಾಷ್ಟ್ರದಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನ 3 ಲಾಂಛನಗಳು. ಇವುಗಳಿಗೆ ಅವಮಾನ ಎಸಗುವ ಯಾವುದೇ ವ್ಯಕ್ತಿಯ ಕೃತ್ಯ ರಾಷ್ಟ್ರದ್ರೋಹವಾಗಿದೆ. ಕಾಲಕಾಲಕ್ಕೆ ರಾಜಕೀಯದ ಲಾಭ ಪಡೆಯಲು ಇಲ್ಲವೇ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು, ಜನರ ಗಮನ ಬೇರೆ ಕಡೆ ಸೆಳೆಯಲು ರಾಷ್ಟ್ರಧ್ವಜದಂತಹ ವಿವಾದವನ್ನು ಹುಟ್ಟು ಹಾಕುತ್ತದೆ ಎಂದಿದ್ದಾರೆ. 


Spread the love

About Laxminews 24x7

Check Also

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ