ನವದೆಹಲಿ: ಮದುವೆಯಾಗಲು ಇನ್ನೇನು ಕೆಲವೇ ಸಮಯ ಬಾಕಿ, ವಧು ವರ ಇಬ್ಬರೂ ಮುಂದಿನ ಜೀವನದ ಕನಸನ್ನು ಕಾಣುತ್ತಾ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದರು. ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು, ಎಲ್ಲಾ ರೀತಿಯ ತಯಾರಿ ನಡೆಯುತ್ತಿತ್ತು. ವರ ದಿಬ್ಬಣದೊಂದಿಗೆ ತನ್ನ ಬಾಳ ಸಂಗಾತಿಯಾಗಲಿದ್ದ ಯುವತಿಯ ಮನೆಗೆ ತೆರಳಲು 24 ಗಂಟೆಯಷ್ಟೇ ಬಾಕಿ ಇತ್ತು.
ಆದರೆ ಅಷ್ಟರಲ್ಲೇ ವರನ ವಾಟ್ಸಾಪ್‌ಗೆ ಬಂದ ಅಶ್ಲೀಲ ವಿಡಿಯೋ ಒಂದು ಇಡೀ ವಾತಾವರಣವನ್ನೇ ಬದಲಾಯಿಸಿದೆ. ವಿಡಿಯೋ ನೋಡಿದ ವರ ಮದುವೆಗೆ ನಿರಾಕರಿಸಿದ್ದಾನೆ. ಅತ್ತ ವಧುವಿನ ಅಕ್ಕ ತನ್ನದೇ ಸಂಬಂಧಿ ವಿರುದ್ಧ ದೂರು ದಾಖಲಿಸಿದ್ದಾಳೆ.
ಸದ್ಯ ಪೊಲೀಸರು ಪ್ರಕರಣ ತನಿಖೆ ಆರಂಭಿಸಿದ್ದಾರೆ. ವಾರಾಣಸಿಯ ಗಂಗೆ ಬಳಿ ಇರುವ ರಾಮನಗರದ ರಾಮಪುರ ವಾರ್ಡ್‌ನ ಓರ್ವ ಯುವತಿಯ ವಿವಾಹಹ ಮವೂನ ಯುವಕನೊಂದಿಗೆ ನಿಶ್ಚಯವಾಗಿತ್ತು. ಇಬ್ಬರ ಮದುವೆಯಾಗಲಿತ್ತು. ಆದರೆ ಮದುವೆ ಹಿಂದಿನ ದಿನ ಸಂಜೆ ವರನ ಫೋನ್‌ಗೆ ಕೆಲ ಅಶ್ಲೀಲ ವಿಡಿಯೋಗಳು ಬಂದಿವೆ. ಅದನ್ನು ಓಪನ್ ಮಾಡಿದ ವರನಿಗೆ ಶಾಕ್ ಕಾದಿತ್ತು. ಆ ಎಲ್ಲಾ ವಿಡಿಯೋ ಹಾಗೂ ಫೋಟೋಗಳು ಆತ ಮದುವೆಯಾಗಲಿದ್ದ ಯುವತಿಯದ್ದಾಗಿತ್ತು. ವರ ಈ ಬಗ್ಗೆ ಮೊದಲು ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಬಳಿಕ ಯುವತಿಯ ಮನೆಯವರೊಂದಿಗೆ ಮಾತುಕತೆ ನಡೆದಿದೆ.
ವರ ಈ ಮದುವೆಗೆ ನಿರಾಕರಿಸಿದ್ದಾನೆ. ವರನ ಮಾತುಗಳನ್ನು ಕೇಳಿ ಯುವತಿ ಮನೆಯಲ್ಲಿ ಆತಂಕ ಮನೆ ಮಾಡಿದ್ದು, ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಯುವತಿಯ ಅಕ್ಕ ಇದೆಲ್ಲಕ್ಕೂ ತನ್ನ ಓರ್ವ ಸಂಬಂಧಿಯೇ ಕಾರಣ ಎಂದು ಆರೋಪಿಸಿದ್ದಾಳೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾಳೆ. ವಧುವಿನ ಅಕ್ಕನ ಮದುವೆ ಅಹರೌರಾದ ಯುವಕನೊಂದಿಗೆ ನಡೆದಿತ್ತು. ಹೀಗಾಗಿ ತಂಗಿ ಸಾಮಾನ್ಯವಾಗಿ ಅಕ್ಕ-ಭಾವನ ಮನೆಗೆ ಹೋಗಿ ಬರುತ್ತಿದ್ದಳು.
Laxmi News 24×7