ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ. ಸಿದ್ದರಾಮಯ್ಯ ಬಳಿ ಅಂದು ಪುಲಿಕೇಶಿ ನಗರದಿಂದ ಜನ ಬಂದಿರುವ ಬಗ್ಗೆ ಮಾತಾಡಿದ್ದಷ್ಟೇ. ಅದರ ಹೊರತಾಗಿ ನಾನು ಬೇರೇನೂ ಮಾತನಾಡಿಲ್ಲ.ನೋಟಿಸ್‌ಗೆ ಎರಡು ಮೂರು ದಿನದಲ್ಲಿ ಉತ್ತರಿಸುತ್ತೇನೆ ಎಂದು ಮಾಜಿ ಶಾಸಕ ಅಶೋಕ್ ಪಟ್ಟಣ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನನಗೆ ನೋಟಿಸ್ ನೀಡಿರುವ ವಿಚಾರ ಮಾಧ್ಯಮಗಳಿಂದ ಗೊತ್ತಾಗಿದೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಯುವ ಕಾಂಗ್ರೆಸ್ ಕಾಲದಿಂದಲೂ ಡಿ.ಕೆ ಶಿವಕುಮಾರ್ ನಾನು ಸ್ನೇಹಿತರು. ನನಗೆ ನೋಟಿಸ್ ಇನ್ನೂ ಬಂದಿಲ್ಲ. ನಾನೇನು ಅಂತಾ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಅಖಂಡ ಶ್ರೀನಿವಾಸ್ ಮೂರ್ತಿ ಹಾಗೂ ಅವರ ಹಿಂಬಾಲಕರು ಬಂದಿದ್ದರು. ಅವರು ಮಾತಾಡಿದ್ದನ್ನು ನಾನು ಹೇಳಿದೆ ಅಷ್ಟೇ. ಅದಕ್ಕೂ ನನಗೂ ಸಂಬಂಧ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ಮಾಡುವ ಕೆಲಸ ಮಾಡಿಲ್ಲ. ನಾನು ಈ ಪಾರ್ಟಿಯಲ್ಲಿ 40 ವರ್ಷದಿಂದ ಇದ್ದೇನೆ. ನೋಟಿಸ್ ಕೊಡುವ ಮುನ್ನ ನನ್ನುನ್ನು ಕೇಳಿ ಕೊಡಬಹುದಿತ್ತು. ನೋಟಿಸ್ ನನ್ನ ಕೈಗೆ ಬಂದ ತಕ್ಷಣ ಉತ್ತರ ಕೊಡುತ್ತೇನೆ ಎಂದರು.
Laxmi News 24×7