ಓಸಿ ಜುಗಾರ್ ಆಡಲು ಪ್ರೇರೇಪಿಸುತ್ತಿದ್ದ ಮಹೇಶ ಯಲ್ಲಪ್ಪಾ ಯಲ್ಲಾರಿ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಿದ ಮತ್ತು ಕೊಲೆ ಪ್ರಯತ್ನದಂತಹ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿತನಾದ ವಿಲಾಸ ಶಂಕರ ಬಾಳೆಕುಂದ್ರಿ ಇವರಿಗೆ 1 ವರ್ಷದ ಅವಧಿಗೆ ಗಡಿಪಾರು ಮಾಡಬೇಕು ಪೋಲಿಸ್ ಆಯುಕ್ತರಾದ ರವೀಂದ್ರ ಕೆ ಗಡಾದಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸಾರ್ವಜನಿಕರಿಗೆ ಓಸಿ ಜುಗಾರ್ ಆಡಲು ಪ್ರೇರೇಪಿಸುತ್ತಿದ್ದ ಮಹೇಶ ಯಲ್ಲಪ್ಪಾ ಯಲ್ಲಾರಿ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಿದ ಮತ್ತು ಕೊಲೆ ಪ್ರಯತ್ನದಂತಹ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿತನಾದ ವಿಲಾಸ ಶಂಕರ ಬಾಳೆಕುಂದ್ರಿ ಇವರಿಗೆ 1 ವರ್ಷದ ಅವಧಿಗೆ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಿಬೇಕು ಎಂದು ಉಪ ಪೋಲಿಸ್ ಆಯುಕ್ತರಾದ ರವೀಂದ್ರ ಕೆ ಗಡಾದಿ ಮತ್ತು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸದರಿ ಇಬ್ಬರಿಗೂ ಗಡಿಪಾರು ಮಾಡುವ ಮೂಲಕ ಕಾನುನೂ ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವ ಸಮಾಜ ಘಾತುಕರಿಗೆ ಎಚ್ಚರಿಕೆ ನೀಡಿದಂತಾಗಿದೆ. ಈ ತರಹದ ಮಟಕಾ, ಜುಜಾಟ, ಗಾಂಜಾ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.