Breaking News

ಕಾನ್‌ಸ್ಟೆಬಲ್ ನೌಕರಿ ನಿರಾಕರಿಸಿದ್ದ ಯುವತಿ ಪಿಎಸ್‌ಐಗೆ ಆಯ್ಕೆ

Spread the love

ಮುಗಳಖೋಡ: ಪಟ್ಟಣದ ಬಡ ಕುಟುಂಬದ ಯುವತಿ ಪ್ರೀತಿ ಮಲ್ಲ‍ಪ್ಪ ಬಾಳೋಜಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 25ನೇ ‍ರ‍್ಯಾಂಕ್ ಗಳಿಸಿ ಪಿಎಸ್‌ಐ ನೌಕರಿಗೆ ಆಯ್ಕೆಯಾಗಿದ್ದಾರೆ.

ಗುಡಿಸಲಲ್ಲಿ ವಾಸಿಸುತ್ತಾ, ಮನೆ-ಕೃಷಿ ಕೆಲಸ ಮಾಡುತ್ತಾ ಓದಿ ಸಾಧನೆ ತೋರಿ ಗಮನಸೆಳೆದಿದ್ದಾರೆ.

25 ವರ್ಷದ ಈ ಯುವತಿ 2 ಬಾರಿ ಸಿಕ್ಕಿದ್ದ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ ಕೆಲಸವನ್ನು ನಿರಾಕರಿಸಿದ್ದರು. ಪಿಎಸ್‌ಐ ಹುದ್ದೆ ಗಿಟ್ಟಿಸಿಕೊಳ್ಳಲೇಬೇಕು ಎಂದು ಹಟದಿಂದ ಧಾರವಾಡದಲ್ಲಿದ್ದುಕೊಂಡು ಓದಿ ಪರಿಶ್ರಮದಿಂದ ಯಶಸ್ಸು ಗಳಿಸಿದ್ದಾರೆ.

ಸ್ವಂತ ಊರು ಮುಗಳಖೊಡವಾದರೂ ಅಜ್ಜಿ ಶಾಂತವ್ವ ಲಕ್ಕಪ್ಪ ಪಾಟೀಲ ಅವರ ಆಶ್ರಯದಲ್ಲಿ ಅಥಣಿ ತಾಲ್ಲೂಕಿನ ಖವಟಕೊಪ್ಪ ಗ್ರಾಮದಲ್ಲಿದ್ದರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದಿದ್ದರು. ಸಂಕ್ರಟ್ಟಿ ಗ್ರಾಮದಲ್ಲಿ ಪ್ರೌಢಶಾಲಾ ಶಿಕ್ಷಣ, ಎಸ್‌ಎಂಎಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ, ಜಮಖಂಡಿಯ ಬಿಎಲ್‌ಡಿ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ