ಬೆಂಗಳೂರು: ರಾಜ್ಯದಾದ್ಯಂತ 24 ಗಂಟೆ ಅವಧಿಯಲ್ಲಿ 31,198 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 50 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಕೋವಿಡ್ ಕಾಣಿಸಿಕೊಂಡಾಗಿನಿಂದ ಈವರೆಗೆ 24 ಗಂಟೆಗಳ ಅವಧಿಯಲ್ಲಿ ಚೇತರಿಕೆ ಹೊಂದಿದವರ ಗರಿಷ್ಠ ಸಂಖ್ಯೆ ಇವಾಗಿವೆ. ಒಂದು ದಿನದ ಅವಧಿಯಲ್ಲಿ 1.49 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.
ಸೋಂಕು ದೃಢ ಪ್ರಮಾಣ ಶೇ 20.91 ರಷ್ಟಿದೆ. ನಾಲ್ಕು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ನಾಲ್ಕು ಅಂಕಿ, 25 ಜಿಲ್ಲೆಗಳಲ್ಲಿ ಮೂರು ಅಂಕಿಯಲ್ಲಿದೆ. ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, 15,199 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಮೈಸೂರಿನಲ್ಲಿ 1,877, ಧಾರವಾಡದಲ್ಲಿ 1,500, ತುಮಕೂರಿನಲ್ಲಿ 1,315 ಹಾಗೂ ಹಾಸನದಲ್ಲಿ 1,037 ಮಂದಿ ಹೊಸದಾಗಿ ಸೋಂಕಿತ ರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ಇವೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 37.23 ಲಕ್ಷಕ್ಕೆ ಏರಿಕೆಯಾಗಿದೆ.