ಬೆಂಗಳೂರು: ಫುಡ್ ಡೆಲಿವರಿ ಬಾಯ್(Food delivery boy) ಯುವತಿಗೆ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕಸವನಹಳ್ಳಿಯಲ್ಲಿ ನಡೆದಿದೆ. ಮೊಬೈಲ್‌ಗೆ ಅಶ್ಲೀಲ ಫೋಟೋ(Photos) ಕಳಿಸಿ ಕಿರಿಕಿರಿ ಮಾಡಿದ ಯುವಕನ ವಿರುದ್ಧ ಯುವತಿ ಸ್ನೇಹಿತ ಪೊಲೀಸ್ ಆಯುಕ್ತರಿಗೆ(police commissioner) ಟ್ವೀಟ್ ಮಾಡಿದ್ದು, ಯುವತಿಗೆ ಕಿರುಕುಳ ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದಾನೆ. ಫುಡ್ ಡೆಲಿವರಿಗಾಗಿ ನಂಬರ್ ನೀಡಿದ್ದ ಬೆಂಗಳೂರಿನ ಕಸವನಹಳ್ಳಿಯ ಯುವತಿಗೆ ಮೆಸೇಜ್ ಮಾಡಿ ಕಿರಿಕಿರಿ ಮಾಡಿದ್ದಾನೆ. ಬಿಹಾರದ ಮೊಬೈಲ್ ಸಂಖ್ಯೆಯಿಂದ ಮೆಸೇಜ್ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಫುಡ್ ಡೆಲಿವರಿ ಮಾಡಿದ ನಂತರವೂ ಮೆಸೆಜ್ ಮಾಡಿರುವ ಡೆಲಿವರಿ ಬಾಯ್, ನಿನ್ನ ಸ್ನೇಹಿತ ಎಂದು ಹೇಳಿಕೊಂಡು ವಾಟ್ಸ್ ಆ್ಯಪ್ ಮೆಸೆಜ್ ಮಾಡಿದ್ದಾನೆ. ಮಧ್ಯರಾತ್ರಿ 11 ಗಂಟೆಗೆ ಮೆಸೆಜ್, ಕಾಲ್ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಪ್ರಿಂಕ್ಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.
Laxmi News 24×7