Breaking News

ಪ್ರತಿ ಮನೆಯ್ಲೂ ಕನಿಷ್ಠ ಒಂದಾದರೂ ಹಸು ಸಾಕಬೇಕು. ಸರ್ವೋತ್ತಮ ಜಾರಕಿಹೊಳಿ

Spread the love

ಕಕಮರಿ (ಬೆಳಗಾವಿ ಜಿಲ್ಲೆ): ‘ಪ್ರತಿ ಮನೆಯ್ಲೂ ಕನಿಷ್ಠ ಒಂದಾದರೂ ಹಸು ಸಾಕಬೇಕು. ಹೈನುಗಾರಿಕೆ ಮಾಡಬೇಕು. ಹಾಲು ಉತ್ಪಾದಕರ ಸಂಘದಲ್ಲಿ ಸದಸ್ಯತ್ವ ಪಡೆದು ಸವಲತ್ತುಗಳನ್ನು ಗಳಿಸಿಕೊಂಡು ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಬೇಕು’ ಎಂದು ಗೋಕಾಕದ ಲಕ್ಷ್ಮಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಸಲಹೆ ನೀಡಿದರು.

ಗ್ರಾಮದ ರಾಯಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

 

‘ಹಾಲು ಉತ್ಪಾದಕರ ಸಂಘದಿಂದ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

 

ಸಾನ್ನಿಧ್ಯ ವಹಿಸಿದ್ದ ರಾಯಲಿಂಗೇಶ್ವರ ಸಂಸ್ಥಾನ ಮಠದ ಅಭಿನವ ಗುರುಲಿಂಗಜಂಗಮ ಸ್ವಾಮೀಜಿ ಮಾತನಾಡಿದರು.

 

ಮುತ್ತಣ್ಣ ಮಹಾರಾಜ ನೇತೃತ್ವ ವಹಿಸಿದ್ದರು. ಐರಾವತಿ ಗುಡ್ಡಾಪೂರ ಅಧ್ಯಕ್ಷತೆ ವಹಿಸಿದ್ದರು. ಅಪ್ಪುಗೌಡ ಪಾಟೀಲ, ರಮೇಶ ಸಿಂದಗಿ, ನಿಂಗಪ್ಪ ನಂದೇಶ್ವರ, ಅವಿನಾಶ ನಾಯಿಕ, ಕೆಎಂಎಫ್‌ ಇನ್‌ಸ್ಪೆಕ್ಟರ್‌ ಆಶಾ ಬಿರಾದಾರ, ಬಿ.ಕೆ. ಜಾಧವ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೆೇಶಕಿ ಶ್ವೇತಾ ಹಾಡಕರ, ಗ್ರಾ.ಪಂ. ಉಪಾಧ್ಯಕ್ಷೆ ಮಹಾದೇವಿ ಒಡೆಯರ, ಹಣಮಂತ ಹಾವಣ್ಣವರ, ಗಿರೀಶ ಬಸರಗಿ, ಬಸವಂತ ಗುಡ್ಡಾಪೂರ, ಬ್ರಹ್ಮಾನಂದ ಬಸರಗಿ ಇದ್ದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ