ಬೆಂಗಳೂರು: ದೀಪಾಂಜಲಿನಗರದ ಡಿಪೋಗೆ ಸೇರಿದಂತ BMTC ಬಸ್ಸೊಂದು ( BMTC Bus ) ಕೆ ಆರ್ ಮಾರುಕಟ್ಟೆಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ( Fire ) ರಸ್ತೆಯಲ್ಲೇ ಧಗಧಗಿಸಿ ಹೊತ್ತಿ ಉರಿದಿರೋ ಘಟನೆ, ಇಂದು ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕೂಡದ ಬಳಿಯಲ್ಲಿ ತೆರಳುತ್ತಿದ್ದಂತ ಬಿಎಂಟಿಸಿ ಬಸ್ಸೊಂದು, ಕೆ ಆರ್ ಮಾರುಕಟ್ಟೆಗೆ ತೆರಳುತ್ತಿದ್ದಂತ ವೇಳೆ, ಕಾಣಿಸಿಕೊಂಡಂತ ಬೆಂಕಿಯಿಂದಾಗಿ ಧಗಧಗಿಸಿ ಹೊತ್ತಿ ಉರಿದಿದೆ. ಕೂಡಲೇ ಅಲ್ಲೇ ಇದ್ದಂತ ಮಹಾನಗರ ಪಾಲಿಕೆಯ ಕಸದ ವಾಹನದಿಂದ ನೀರಿನಿಂದ ಬೆಂಕಿ ನಂದಿಸೋ ಕಾರ್ಯವನ್ನು ನಡೆಸಲಾಯಿತು. ಬೆಂಕಿ ಕಾಣಿಸಿಕೊಂಡ ತಕ್ಷಣ ಪ್ರಯಾಣಿಕರನ್ನು ಕೆಳಗೆ ಇಳಿಸಿದ ಕಾರಣ, ಮುಂದಾಗಲಿದ್ದ ಭಾರೀ ಅನಾಹುತ ತಪ್ಪಿದೆ.
Laxmi News 24×7