Breaking News

ಬನಹಟ್ಟಿ: ಬನಹಟ್ಟಿಯ ನಾಲ್ಕು ಜನರು ಪಿಎಸ್‌ಐ ಹುದ್ದೆಗೆ ಆಯ್ಕೆ

Spread the love

ರಬಕವಿ-ಬನಹಟ್ಟಿ: ಬನಹಟ್ಟಿಯ ನಾಲ್ಕು ಜನರು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸ್ಥಳೀಯ ಮಂಗಳವಾರ ಪೇಟೆಯಲ್ಲಿ ಸ್ಟೇಶನರಿ ಅಂಗಡಿಯನ್ನು ಇಟ್ಟುಕೊಂಡಿರುವ ಸೋಮಶೇಖರ ಹಿರೇಮಠರ ಮಗಳು ದೀಪಾ ಹಿರೇಮಠ ಆಯ್ಕೆಯಾಗುವುದರ ಮೂಲಕ ರಾಜ್ಯಕ್ಕೆ 14 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸ್ಥಳೀಯ ಎಸ್ಟಿಸಿ ಕಾಲೇಜಿನಲ್ಲಿ 2016ರಲ್ಲಿ ಬಿಎ ಪದವಿ ಪಡೆದುಕೊಂಡಿದ್ದ ದೀಪಾ ಅರ್ಥಶಾಸ್ತ್ರ ವಿಷಯದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಬಂಗಾರದ ಪಡೆದುಕೊಂಡಿದ್ದರು. ಮುಂದೆ ಕೆಎಎಸ್ ಮಾಡುವ ಗುರಿಯನ್ನು ದೀಪಾ ಹಿರೇಮಠ ಹೊಂದಿದ್ದಾರೆ. ಆರು ತಿಂಗಳುಗಳ ಕಾಲ ಧಾರವಾಡದಲ್ಲಿದ್ದುಕೊಂಡು ಯಾವುದೆ ಕೋಚಿಂಗ್ ಕ್ಲಾಸ್ಗೆ ಹೋಗದೆ ಕೋಣೆಯಲ್ಲಿ ಕುಳಿತುಕೊಂಡು ಓದಿದ್ದರು.

ಸಾಧಿಯಾ ಗುರ್ಲ್ ಹೊಸೂರ ಬಿ.ಕಾಮ್ ಪದವಿಧರೆ. 2019ರಲ್ಲಿ ಬಿ.ಕಾಮ್ ಪದವಿಯನ್ನು ಮುಗಿಸಿದ ಸಾಧಿಯಾ ಬನಹಟ್ಟಿಯ ಮನೆಯಲ್ಲಿ ಕುಳಿತುಕೊಂಡು ಓದಿದ್ದರು. ತಂದೆ ಅಬೂಬಕರ್ ಕಾರ್ಯಕ್ರಮಗಳಲ್ಲಿ ಪೆಂಡಾಲ ಹಾಕುವ ಕಾರ್ಯವನ್ನು ಮಾಡುತ್ತಾರೆ. ರಾಜ್ಯಕ್ಕೆ 62 ಸ್ಥಾನ ಪಡೆದುಕೊಂಡಿರುವ ಸಾಧಿಯಾ 22 ವಯಸ್ಸಿನಲ್ಲಿಯೇ ಪಿಎಸ್‌ಐ ಹುದ್ದೆಯನ್ನು ಅಲಂಕರಿಸಿರುವುದು ತಂದೆ ತಾಯಿಗಳಿಗೆ ಅಭಿಮಾನವನ್ನುಂಟು ಮಾಡಿದೆ.

 


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ