ಬೆಳಗಾವಿ: ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ವಿರುದ್ಧ ಕೊನೆಗೂ ಕೇಸ್ ದಾಖಲಾಗಿದೆ.
ಜನವರಿ 16ರಂದು ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ನಡೆದ ಧರ್ಮವೀರ ಸಂಭಾಜಿ ಪಟ್ಟಾಭಿಷೇಕ ದಿನಾಚರಣೆಯಲ್ಲಿ ಭಾಗವಹಿಸಿದ್ದ ಶಾಸಕರು ಕೋವಿಡ್ ನಿಯಮಗಳಿಗೆ ಗೋಲಿ ಹೊಡೆದಿದ್ದರು. ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರು ಶಾಸಕರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ಸಾಕಷ್ಟು ಜನ ಜಮಾವಣೆಗೊಂಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ಎಮ್ಮೆ ಓಡಿಸುವ ಬಹಿರಂಗ ಕಾರ್ಯಕ್ರಮಕ್ಕು ಚಾಲನೆ ನೀಡಿದ್ದರು.
ಈ ವೇಳೆ ಅಲ್ಲಿ ಜನರು ಯಾವುದೇ ಕೋವಿಡ್ ನಿಯಮಗಳನ್ನು ಪಾಲಿಸದೆ ಸಂಪೂರ್ಣವಾಗಿ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದರು. ಇನ್ನು ಇಂತಹ ಕಾರ್ಯಕ್ರಮದಲ್ಲಿ ಶಾಸಕರೇ ಸ್ವತಃ ಭಾಗವಹಿಸಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಇತ್ತ ವಿರೋಧ ಪಕ್ಷದವರು ಕೂಡ ಕೇಸ್ ದಾಖಲಿಸುವಂತೆ ವಾಗ್ದಾಳಿ ನಡೆಸಿದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಬೆಳಗಾವಿ ಕ್ಯಾಂಪ್ ಪೊಲೀಸರು ಅನಿಲ್ ಬೆನಕೆ ವಿರುದ್ಧ ‘ಕರ್ನಾಟಕ ಸಾಂಕ್ರಾಮಿಕ ರೋಗ ತಡೆ’ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಸ್ಪರ್ಧೆ ಆಯೋಜಕರ ವಿರುದ್ಧವೂ ಕೇಸ್ ಜಡಿಯಲಾಗಿದೆ.
Laxmi News 24×7