Home / Uncategorized / ಎರಡು ಮಕ್ಕಳ ತಾಯಿಯ ಜೊತೆ ಸ್ನೇಹ; ಯುವಕನನ್ನು ಗ್ರಾಮಕ್ಕೆ ಕರೆಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

ಎರಡು ಮಕ್ಕಳ ತಾಯಿಯ ಜೊತೆ ಸ್ನೇಹ; ಯುವಕನನ್ನು ಗ್ರಾಮಕ್ಕೆ ಕರೆಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

Spread the love

ಮೈಸೂರು: ಎರಡು ಮಕ್ಕಳ ತಾಯಿಯ ಜೊತೆ ಸ್ನೇಹ ಹೊಂದಿರುವ ಆರೋಪ ಹಿನ್ನೆಲೆ ಗ್ರಾಮಸ್ಥರು ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದಲ್ಲಿ ನಡೆದಿದೆ.

ಮಹೇಶ್‌ ಕುಮಾರ್‌ ಹಲ್ಲೆಗೆ ಒಳಗಾದ ಯುವಕ.

ವಿವಾಹಿತ ಮಹಿಳೆ ಜತೆ ಸ್ನೇಹ ಬೆಳೆಸಿದ ಹಿನ್ನೆಲೆ ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದಲ್ಲಿ ಯುವಕನಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಸದ್ಯ ಗಾಯಾಳು ಮಹೇಶ್‌ ಕುಮಾರ್‌ಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಿಯತಮೆಯ ಮೂಲಕ ಪ್ರಿಯತಮನನ್ನ ಗ್ರಾಮಕ್ಕೆ ಕರೆಸಿಕೊಂಡ ಸ್ಥಳೀಯರು ಗ್ರಾಮಕ್ಕೆ ಬರುತ್ತಿದ್ದಂತೆ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಯುವಕ ಮಹೇಶ್, ಮಹಿಳೆಯ ಮದುವೆ ಆಗುವ ಮುಂಚಿನಿಂದಲೂ ಸ್ನೇಹ ಹೊಂದಿದ್ದ. ಮಹಿಳೆ ಮದುವೆಯಾಗಿ ಎರಡು ಮಕ್ಕಳಾದ್ರು ಇವರ ಸ್ನೇಹ ಹಾಗೇ ಇತ್ತು. ಮಹೇಶ್ ಆಗಾಗ ಮಹಿಳೆಯ ಮನೆಗೆ ಬಂದು ಹೋಗುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ವಿಚಾರ ಆಕೆಯ ಪತಿಗೆ ತಿಳಿದಿದೆ. ನಂತರ ಯುವಕನಿಗೆ ಬುದ್ದಿ ಕಲಿಸಲು ನಿರ್ಧಾರ ಮಾಡಿ ಗ್ರಾಮಸ್ಥರ ಸಹಾಯದಿಂದ ಹೊಡೆಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ.

ತಾಯಿಯ ಗರ್ಭದಲ್ಲೇ ಮಗು ಸಾವು, ಹೆರಿಗೆಗಾಗಿ ಪರದಾಟ
ಯಾದಗಿರಿ ಜಿಲ್ಲಾಸ್ಪತ್ರೆಯ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿಯ ಗರ್ಭದಲ್ಲೇ ಮಗು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ. ನಾಲ್ಕು ದಿನಗಳ ಹಿಂದೆಯೇ ಯಾದಗಿರಿ ತಾಲೂಕಿನ ಹೊಸಹಳ್ಳಿ (ಆರ್) ತಾಂಡದ ಸಂಗೀತಾ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡದಿದ್ದಕ್ಕೆ ಮಗು ಸತ್ತಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಗರ್ಭಿಣಿ ಆಸ್ಪತ್ರೆಗೆ ದಾಖಲಾಗಿ ಎರಡು ದಿನಗಳ ಬಳಿಕ ಹೆರಿಗೆ ಮಾಡಲು ವೈದ್ಯರು ಮುಂದಾಗಿದ್ದು ನಿನ್ನೆ ಹೆರಿಗೆಗೆ ಮಾಡುವಾಗ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗರ್ಭದಲ್ಲೇ‌ ಮಗು ಮೃತಪಟ್ಟಿದ್ದರೂ ಹೊರತೆಗೆದಿಲ್ಲ ಎಂದು ಗರ್ಭಿಣಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸದ್ಯ ಗರ್ಭದಲ್ಲಿ ಮೃತ ಶಿಶು ಇಟ್ಟುಕೊಂಡು ಸಂಗೀತಾ ಒದ್ದಾಡ್ತಿದ್ದಾರೆ. ನೋವು ತಾಳಲಾರದೆ ಒದ್ದಾಡುತ್ತಿದ್ರು ಚಿಕಿತ್ಸೆ ನೀಡಿಲ್ಲ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ

Spread the love ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ