Breaking News

ಜ. 26 ಗಣರಾಜ್ಯೋತ್ಸವದಂದು ಇಂಡಿಯಾ ಗೇಟ್, ಕೆಂಪುಕೋಟೆ ಮೇಲೆ ಭಯೋತ್ಪಾದಕ ದಾಳಿ ಸಾಧ್ಯತೆ:

Spread the love

ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವದಂದು (ಜನವರಿ 26), ಭಯೋತ್ಪಾದಕರು ದೆಹಲಿಯಲ್ಲಿ ದಾಳಿ ಮಾಡಬಹುದು. ಗಣರಾಜ್ಯೋತ್ಸವದಂದು ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಗುಪ್ತಚರ ಬ್ಯೂರೋ(ಐಬಿ) ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ.

ಇದರ ಪ್ರಕಾರ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಯೋತ್ಪಾದಕರು ದೇಶದ ನಾಯಕರು ಸೇರಿದಂತೆ ಕೆಲವು ವಿಐಪಿಗಳನ್ನು ಟಾರ್ಗೆಟ್ ಮಾಡುವ ಸೂಚನೆಗಳಿವೆ.

 

IB ಯ ಇನ್ಪುಟ್ ಪ್ರಕಾರ, ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ ಫಾರ್ ಜಸ್ಟಿಸ್ ಗಣರಾಜ್ಯೋತ್ಸವದಂದು ಭಯೋತ್ಪಾದಕ ದಾಳಿಯನ್ನು ನಡೆಸುವ ಪ್ರಕ್ರಿಯೆಯಲ್ಲಿದೆ. ಕಾರ್ ನಲ್ಲಿ ಸ್ಫೋಟಕಗಳನ್ನು ಇರಿಸುವ ಮೂಲಕ ಸಂಘಟನೆಗಳು ಇಂಡಿಯಾ ಗೇಟ್ ಮತ್ತು ಕೆಂಪುಕೋಟೆಯ ಸುತ್ತಲೂ ದಾಳಿ ಮಾಡಬಹುದು. ಕಳೆದ ವರ್ಷದಂತೆ ಸಿಖ್ ಫಾರ್ ಜಸ್ಟಿಸ್ ಕೆಂಪುಕೋಟೆಯಲ್ಲಿ ಧಾರ್ಮಿಕ ಧ್ವಜಾರೋಹಣ ಮಾಡಿದ ಘಟನೆಯನ್ನು ಪುನರಾವರ್ತಿಸಬಹುದು ಎಂದು ಹೇಳಲಾಗಿದೆ.

ಪಾಕಿಸ್ತಾನದಿಂದ ತಂದ ಸ್ಫೋಟಕ

ಭಯೋತ್ಪಾದಕರು ಪಾಕಿಸ್ತಾನದಿಂದ ಭಾರತಕ್ಕೆ ಸ್ಫೋಟಕಗಳನ್ನು ತಂದಿದ್ದಾರೆ ಎಂದು ಗುಪ್ತಚರ ದಳ ಹೇಳಿಕೊಂಡಿದೆ. ಗಾಜಿಪುರ ಮಂಡಿಯಲ್ಲಿ ಪತ್ತೆಯಾದ ಐಇಡಿ ಅದರ ಭಾಗವಾಗಿತ್ತು. ಜಮ್ಮು ವಿಮಾನ ನಿಲ್ದಾಣದ ಮೇಲೆ ಹೇಗೆ ಡ್ರೋನ್ ದಾಳಿ ನಡೆದಿದೆಯೋ ಅದೇ ರೀತಿಯಲ್ಲಿ ಉಗ್ರರು ಡ್ರೋನ್ ಮೂಲಕ ದಾಳಿ ಮಾಡಬಹುದು. ಡ್ರೋನ್‌ಗಳು ಪರೇಡ್ ಮಾರ್ಗ ಅಥವಾ ಅದರ ಹಿಂದೆ ದಾಳಿ ನಡೆಸುತ್ತವೆ ಎಂದು ಹೇಳಲಾಗುತ್ತಿದೆ.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ