Breaking News

ಮಾಸ್ಕ್ ಹಾಕದ ಯುವಕನನ್ನು ಕೊರಳಪಟ್ಟಿ ಹಿಡಿದು ಎಳೆದೊಯ್ದ ಪೊಲೀಸ್

Spread the love

ಹುಬ್ಬಳ್ಳಿ/ಧಾರವಾಡ: ಕೊರೊನಾ ಪ್ರಕರಣಗಳು ವಿಪರೀತ ಹೆಚ್ಚಳವಾಗುತ್ತಿರುವ ಕಾರಣ ಸರ್ಕಾರ ವೀಕೆಂಡ್​ ಕರ್ಫ್ಯೂ ವಿಧಿಸಿದೆ. ಶನಿವಾರ ವೀಕೆಂಡ್​ ಕರ್ಫ್ಯೂ ಕಾರಣ ಎಲ್ಲೆಡೆಯೂ ಪೊಲೀಸ್ ಗಸ್ತು. ನಗರದಲ್ಲಿ ಯಾವುದೋ ಕಾರಣಕ್ಕೆ ಯುವಕನೊಬ್ಬ ಮಾಸ್ಕ್​ ಇಲ್ಲದೇ ಹೊರಬಂದು ಖಾಕಿ ಕೈಗೆ ಸಿಕ್ಕಿಬಿದ್ದು ಪಡಿಪಾಟಲು ಪಟ್ಟ ಘಟನೆ ನಡೆದಿದೆ.

ಹಳೇಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೊಲೀಸರು ತಪಾಸಣೆ ಮಾಡುತ್ತಿರುವ ವೇಳೆ ಬೈಕ್​ ಸವಾರನೊಬ್ಬ ಮಾಸ್ಕ್​ ಇಲ್ಲದೇ ಬಂದಿದ್ದಾನೆ. ಇದನ್ನು ಕಂಡಿದ್ದೇ ತಡ ಮುಗಿಬಿದ್ದ ಪೊಲೀಸ್​ ಯುವಕನನ್ನು ಧರಧರನೇ ಎಳೆದುಕೊಂಡು ಹೋಗಿದ್ದಾನೆ. ಇದಕ್ಕೂ ಮುನ್ನ ಇನ್ನೊಬ್ಬ ಸವಾರ ಬೈಕ್​ ಮೇಲೆ ಕುಳಿತಿದ್ದಾಗಲೇ ಅವನನ್ನು ಕೆಡವಲು ಬೈಕ್​ ಅನ್ನು ತಳ್ಳಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

ಇದನ್ನು ಅಲ್ಲಿಯೇ ಇದ್ದವರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೇ ಮಾಸ್ಕ್​ ಹಾಕದಿದ್ದರೆ ದಂಡ ಅಥವಾ ಬುದ್ಧಿ ಹೇಳಬೇಕಾದ ಪೊಲೀಸಪ್ಪ ಯುವಕನ ಜೊತೆ ಈ ರೀತಿ ನಡೆದುಕೊಂಡು ಸಾಮಾಜಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಅಲ್ಲದೇ ಈ ಯುವಕ ತನ್ನಿಂದ ತಪ್ಪಾಗಿದೆ. ಇನ್ನೊಮ್ಮೆ ಈ ರೀತಿ ಮಾಡಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು..

Spread the love ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ