ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬ್ಯಾಂಕ್‌ನ ಶಾಖೆಯೊಂದರ ಎಲ್ಲಾ ಸಿಬ್ಬಂದಿಗೆ ಸೋಂಕು ತಗುಲಿರುವುದರಿಂದ ಬ್ಯಾಂಕ್ ಸೀಲ್‌ಡೌನ್ ಮಾಡಿರುವ ಘಟನೆ ನಡೆದಿದೆ.
ಸೋಮವಾರಪೇಟೆ ಪಟ್ಟಣದಲ್ಲಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯ ಎಲ್ಲಾ ಸಿಬ್ಬಂದಿಗೂ ಸೋಂಕು ದೃಢಪಟ್ಟಿದೆ. ಪರಿಣಾಮವಾಗಿ ಕಳೆದ ಮೂರು ದಿನಗಳಿಂದ ಬ್ಯಾಂಕ್ ಮುಚ್ಚಿದೆ. ವಹಿವಾಟಿಗೆ ಬ್ಯಾಂಕ್ ಇಲ್ಲದೇ ಗ್ರಾಹಕರು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಹೊಸ ಮಾರ್ಗಸೂಚಿ – 10ಕ್ಕಿಂತ ಹೆಚ್ಚು ಕೇಸ್ ಬಂದ್ರೆ ಅಪಾರ್ಟ್‍ಮೆಂಟ್ ಸೀಲ್‍ಡೌನ್
ಪಟ್ಟಣದ ಬಸವೇಶ್ವರ ರಸ್ತೆ, ಮಹದೇಶ್ವರ ಬಡಾವಣೆ ಹಾಗೂ ಕೆಇಬಿ ಸಮೀಪ ಮೂರು ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಮೂರು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಚಪ್ಪ ತಿಸಿದ್ದಾರೆ.
Laxmi News 24×7