ಯಮಕನಮರಡಿ: ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಯಮಕರನಮಡಿ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡಬೇಕು ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಕರೆ ನೀಡಿದರು.
ಸತೀಶ್ ಜಾರಕಿಹೊಳಿ ಫೌಂಡೇಶನ್ ಹಮ್ಮಿಕೊಂಡಿದ್ದ ಯಮಕನಮರಡಿ ಮತಕ್ಷೇತ್ರದ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಸ್ಯರು ಸ್ವಚ್ಛತೆ ಕಾರ್ಯಕ್ರಮ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಅವುಗಳಿಗೆ ಕ್ಷೇತ್ರದ ಸಾರ್ವಜನಿಕರು ಸಹಕಾರ ನೀಡಬೇಕೆಂದು ವಿನಂತಿಸಿದರು.
ಕರೋನಾ, ಓಮಿಕ್ರಾನ್ ಪ್ರಕರಣ ಹೆಚ್ಚಳವಾಗುತ್ತಿದ್ದು, ಸರ್ಕಾರ 1ರಿಂದ 9ನೇ ತರಗತಿ ಶಾಲೆಗಳನ್ನು ಬಂದ್ ಮಾಡಿದ್ದು, ಜನತೆ ಉತ್ತಮ ಆರೋಗ್ಯ ಕಾಯ್ದುಕೊಂಡು ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಓ, ಮಲ್ಲಿಕಾರ್ಜುನ ಪಾಟೀಲ್, ನಿವೃತ್ತ ವೈದ್ಯಾಧಿಕಾರಿ ಅಶೋಕ ಉಬನಾನಿಮಠ, ತಾಲೂಕು ಪಿಡಿಓಗಳ ಸಂಘದ ಅಧ್ಯಕ್ಷ ನಂದಗಾವಿ, ಪಾಶ್ಚಾಪೂರ ಗ್ರಾಪಂ ಅಧ್ಯಕ್ಷ ಸರಸ್ವತಿ ಕುರುಬರ, ಜಂಗಲಿಸಾಬ ನಾಯ್ಕ, ಅಬ್ದುಲ್ ಗಣಿ ದರ್ಗಾ, ಸರಫರಾಜ ಫಿರಜಾದೆ, ಶಂಕರ ದುಂಡಗಿ, ಕುಮಾರ ಗುಡುಗನಟ್ಟಿ, ವಿನೋದ ಡೊಂಗರೆ, ಮಾರುತಿ ಗುಟಗುದ್ದಿ, ಸುರೇಶ ನಾಯ್ಕ ಸೇರಿಂದತೆ ಗ್ರಾಪಂ ಸದಸ್ಯರು ಮತ್ತು ಫೌಂಡೇಶನ್ ಸದಸ್ಯರು ಇದ್ದರು.