Breaking News

ಹುದಲಿಯಲ್ಲಿ ರಾಹುಲ್ ಜಾರಕಿಹೊಳಿ ಅಭಿಮಾನಿ ಬಳಗ ಉದ್ಘಾಟನೆ

Spread the love

ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರಾಹುಲಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳು ಆಗಲಿ. ಬಡವರ ಕಣ್ಣೀರೊರೆಸುವ ಕಾರ್ಯಗಳು ನಮ್ಮಿಂದಾಗಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದಲ್ಲಿ ಶುಕ್ರವಾರ ರಾಹುಲ್‌ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ರಾಹುಲ್‌ ಅಭಿಮಾನಿಗಳ ಬಳಗ ವರ್ಷದ 365 ದಿನವೂ ಸಕ್ರಿಯವಾಗಿರಬೇಕು. ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ, ಬಡವರ ಪರ ಕೆಲಸಗಳನ್ನು ಮಾಡಬೇಕು. ಕ್ರೀಡೆ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಇದಕ್ಕೆ ನಮ್ಮಿಂದ ಎಲ್ಲ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಹುದಲಿ ಗ್ರಾಮದ ಜನರು ಸಹ ತಮ್ಮ ಯಾವುದೇ ಸಮಸ್ಯೆ ಇದ್ದರು, ನಮ್ಮನ್ನ ಅಥವಾ ನಮ್ಮ ಅಭಿಮಾನಿ ಬಳಗದ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತರುವ ಕೆಲಸ ಮಾಡಬೇಕು. ಆ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.


Spread the love

About Laxminews 24x7

Check Also

ತ್ರಿಕಾಲ ಪೂಜಿತೆ ದಾನಮ್ಮದೇವಿ ದರ್ಶನ ಪಡೆದ ಸಚಿವ ಎಂಬಿಪಿ; ಪ್ರವಚನ ಆಲಿಸಿ ಸ್ವಾಮೀಜಿ ಆಶಿರ್ವಾದ ಪಡೆದ ಸಚಿವರು

Spread the loveತ್ರಿಕಾಲ ಪೂಜಿತೆ ದಾನಮ್ಮದೇವಿ ದರ್ಶನ ಪಡೆದ ಸಚಿವ ಎಂಬಿಪಿ; ಪ್ರವಚನ ಆಲಿಸಿ ಸ್ವಾಮೀಜಿ ಆಶಿರ್ವಾದ ಪಡೆದ ಸಚಿವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ