Breaking News

ಬೆಳಗಾವಿ ಕಡೆಗೆ ಹೊರಟ್ಟಿದ್ದ ರೈಲು ಹಳಿತಪ್ಪಿ 300 ಮೀಟರ್ ವರೆಗಿನ ರೈಲು ಮಾರ್ಗ ಕಿತ್ತು ಹೋಗಿದೆ.

Spread the love

ಅಳ್ನಾವರ:  ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಬೆಳಗಾವಿ ಕಡೆಗೆ ಹೊರಟ್ಟಿದ್ದ ಸರಕು ಸಾಗಣೆ ರೈಲು ಹಳಿತಪ್ಪಿದ್ದು, 300 ಮೀಟರ್ ವರೆಗಿನ ರೈಲು ಮಾರ್ಗ ಕಿತ್ತು ಹೋಗಿದೆ.

ರೈಲು ನಿಲ್ದಾಣದಲ್ಲಿ ಒಟ್ಟು ಆರು ಮಾರ್ಗಗಳಿವೆ.

ಕೊನೆಯ ಮಾರ್ಗ ಗೂಡ್ಸ್ ರೈಲುಗಳ ಸಂಚಾರಕ್ಕೆ ಮೀಸಲಾಗಿದೆ. ಇಲ್ಲಿನ ನಿಲ್ದಾಣದಿಂದ ರೈಲು ಹೊರಡುತ್ತಿದ್ದಂತೆ ಭಾರಿ ಸದ್ದು ಉಂಟಾಯಿತು, ಹಳಿಯ ಮಾರ್ಗದಲ್ಲಿ ದೂಳು ಎದ್ದಿತ್ತು. ಸಕಾಲದಲ್ಲಿ ರೈಲು ನಿಲುಗಡೆ ಮಾಡಿದ್ದರಿಂದ ಯಾವುದೇ ಅನಾಹುತ ಆಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರೈಲ್ವೆ ಇಲಾಖೆಯ ಕಾರ್ಮಿಕರು ಸಂಜೆಯವರೆಗೂ ಕಿತ್ತು ಹೋದ ಮಾರ್ಗದ ದುರಸ್ತಿಯಲ್ಲಿ ತೊಡಗಿದ್ದರು. ಕ್ರೇನ್ ಬಳಸಿ ಹೊಸ ಸ್ಲೀ‍ಪರ್‌ಗಳನ್ನು ಅಳವಡಿಸಲಾಯಿತು.

ನಿಲ್ದಾಣದ ಕೊನೆಯ ಮಾರ್ಗದಲ್ಲಿ ನಾಹುತ ಸಂಭವಿಸಿದ್ದರಿಂದ ಪ್ರಯಾಣಿಕರ ರೈಲುಗಳು ಓಡಾಟಕ್ಕೆ ಯಾವುದೇ ತೊಂದರೆ ಆಗಲಿಲ್ಲ.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.. ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ