ಮುದ್ರಾ ಯೋಜನಾಯನ್ನು ಪ್ರತಿಯೊಬ್ಬರು ಕೇಳಿರಬಹುದು. ಅವುಗಳ ಸಂಕ್ಷಿಪ್ತವಾದ ವಿವರಗಳಿಗಾಗಿ ಹುಡುಕಾಟ ನಡೆಸಿದ್ದೀರಾ? ಈ ಯೋಜನೆಯಿಂದ ಏನ್ ಉಪಯೋಗ..? ಹೇಗೆ ಸಾಲ ಪಡೆಯುವುದು..?
ಅದಕ್ಕೆ ಬೇಕಾದ ಮಾನದಂಡವೇನು..? ಅನ್ನೋದರ ಬಗ್ಗೆ ಯೋಚಿಸುತ್ತೀರಾ.. ಹಾಗಿದ್ದರೆ ಇಲ್ಲಿದೆ ನಿಮಗೆ ಸಂಪೂರ್ಣ ಮಾಹಿತಿ.
ಪ್ರಧಾನ ಮಂತ್ರಿ ಮುದ್ರಾ ಯೋಜನಾ (PMMY) ಎಂಬುದು ಆಗಸ್ಟ್ 8, 2015ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಯೋಜನೆ. ಕಾರ್ಪೊರೇಟರರ ಹೊರತಾಗಿ, ಕೃಷಿ ವಲಯಕ್ಕೆ ಅಲ್ಲದೆ ಸಣ್ಣ/ಕಿರು ಸಂಸ್ಥೆಗಳಿಗೆ 10 ಲಕ್ಷ ರೂಪಾಯಿ ತನಕ ಸಾಲ ನೀಡುವಂಥ ಯೋಜನೆ ಇದು. ಇವುಗಳನ್ನು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಮುದ್ರಾ ಸಾಲಗಳು ಎಂದು ವರ್ಗೀಕರಿಸಲಾಗುತ್ತದೆ. ಈ ಸಾಲಗಳನ್ನು ವಾಣಿಜ್ಯ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು, ಸಣ್ಣ ಹಣಕಾಸು ಬ್ಯಾಂಕ್ಗಳು, ಕೋ ಆಪರೇಟಿವ್ ಬ್ಯಾಂಕ್ಗಳು, ಕಿರು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೂಲಕವಾಗಿ ವಿತರಿಸಲಾಗುತ್ತದೆ. ಈ ಮೇಲ್ಕಂಡ ಯಾವ ಸಂಸ್ಥೆಯನ್ನಾದರೂ ಸಾಲಕ್ಕಾಗಿ ಮನವಿ ಮಾಡಿಕೊಳ್ಳಬಹುದು, ಇಲ್ಲದಿದ್ದರೆ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅಪ್ಲೈ ಮಾಡಬಹುದು.