Breaking News

ನಿಮ್ಮ ಮೊಬೈಲ್‌ ಗೂ ಬಂದಿದೆಯಾ ಈ ಮೆಸೇಜ್..? ಹಾಗಿದ್ರೆ ಹುಶಾರ್‌.!

Spread the love

ದೇಶದಲ್ಲಿ ಆನ್ಲೈನ್ ವಂಚಕರ ಬಳಗ ದಿನೇ ದಿನೇ ಹೊಸ ತಂತ್ರಗಳನ್ನು ತಮ್ಮ ಕಸುಬಿಗೆ ಅಳವಡಿಸಿಕೊಳ್ಳುವ ಮೂಲಕ ಜನಸಾಮಾನ್ಯರ ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆ. ಇದೇ ವೇಳೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೀಗೆ ವಂಚನೆ ಎಸಗುವವರ ಕಾಟವೂ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

 

ನೀವು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಗ್ರಾಹಕರಾಗಿದ್ದು, “Dear A/c Holder Your SBI Bank Documents has expired A/c will be Blocked. Update Your Document Now” ಎಂಬ ಎಸ್‌ಎಂಎಸ್‌ ಒಂದು ನಿಮ್ಮ ಮೊಬೈಲ್‌ಗೆ ಬಂದಿರಬಹುದು ಅಥವಾ ಬರಲೂಬಹುದ

“ನಿಮ್ಮ ಖಾತೆಗೆ ಲಗತ್ತಿಸುವ ದಾಖಲೆಗಳ ವಾಯಿದೆ ಮುಗಿದಿದ್ದು, ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುವುದು. ನಿಮ್ಮ ದಾಖಲೆಯನ್ನು ಈಗಲೇ ಅಪ್ಡೇಟ್ ಮಾಡಿ,” ಎಂಬ ಅರ್ಥದ ಈ ಎಸ್‌ಎಂಎಸ್ ಓದುವ ಖಾತೆದಾರರಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗಿ, ಆ ಎಸ್‌ಎಂಎಸ್‌ನಲ್ಲಿರುವ ಲಿಂಕ್ ಒತ್ತಿಬಿಡುವ ಸಾಧ್ಯತೆ ಇರುತ್ತದೆ.

ನೀವು ಯಾವ ಕಾರಣಕ್ಕೂ ಅಂಥ ಲಿಂಕ್‌ಗಳನ್ನು ಒತ್ತಬೇಡಿ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಿಐಬಿ ವಾಸ್ತವಾಂಶ ಸಾರುವ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ.

“ನಿಮ್ಮ ಎಸ್‌ಬಿಐ ಖಾತೆಯನ್ನು ಬ್ಲಾಕ್ ಮಾಡಿರುವುದಾಗಿ ಹೇಳುವ ಸಂದೇಶವೊಂದು ಸುತ್ತು ಹೊಡೆಯುತ್ತಿದ್ದು ಇದು ನಕಲಿ. ನಿಮ್ಮ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳನ್ನು ಕೇಳುವ ಯಾವುದೇ ಇ-ಮೆಲ್/ಎಸ್‌ಎಂಎಸ್‌ಗೆ ಪ್ರತಿಕ್ರಿಯೆ ನೀಡಬೇಡಿ. ಇಂಥ ಯಾವುದೇ ಸಂದೇಶವನ್ನು ನೀವು ಸ್ವೀಕರಿಸಿದಲ್ಲಿ, ಕೂಡಲೇ ಅದನ್ನು [email protected]ಗೆ ವರದಿ ಮಾಡಿ” ಎಂದು ಪಿಐಬಿ ಟ್ವಿಟರ್‌ನಲ್ಲಿ ಎಚ್ಚರಿಕೆ ನೀಡಿದೆ.

 


Spread the love

About Laxminews 24x7

Check Also

ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಅನ್ನೋದು ತಪ್ಪು: ಪಂಡಿತಾರಾಧ್ಯಶ್ರೀ ಅಭಿಪ್ರಾಯ ವಿರೋಧಿಸಿದ ವಚನಾನಂದಶ್ರೀ

Spread the loveಚಿತ್ರದುರ್ಗ, ಸೆಪ್ಟೆಂಬರ್ 7: ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಎಂಬರ್ಥದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ