Breaking News

ಜ್ಯೋತಿಷ್ಯ ಮಾತು ಕೇಳಿ ಮಗಳನ್ನು ಕೊಂದು ನೇಣಿಗೆ ಶರಣಾದ ತಾಯಿ!

Spread the love

ಕೊಯಮತ್ತೂರು: ಜಿಲ್ಲೆಯಲ್ಲಿ ತಾಯಿ-ಮಗಳು ಸಾವಿನ ಸುದ್ದಿ ಸಂಚಲನ ಮೂಡಿಸುತ್ತಿದೆ.

ಜ್ಯೋತಿಷಿಯೊಬ್ಬರ ಮಾತು ಕೇಳಿ ತಾಯಿಯೊಬ್ಬಳು ತನ್ನ ಮಗಳನ್ನು ಕೊಲೆ ಮಾಡಿದಲ್ಲದೇ ತಾನೂ ಸಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಡಿಯಲೂರ್ ಪಕ್ಕದಲ್ಲಿರುವ ಅಪ್ಪನಾಯಕನಪಾಳ್ಯಂ ನಡೆದಿದೆ.

ಘಟನೆಯ ವಿವರ: ಅಪ್ಪನಾಯಕನಪಾಳ್ಯಂ ನಿವಾಸಿ ಧನಲಕ್ಷ್ಮಿ (58) ತನ್ನ ಅಂಗವಿಕಲ ಮಗಳು ಸುಗನ್ಯಾ (30) ಜೊತೆ ವಾಸವಿದ್ದಾರೆ. ಇವರ ಪುತ್ರ ಶಶಿಕುಮಾರ್​ಗೆ ಮದುವೆಯಾಗಿದ್ದು, ಸರವಣಂಪಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಧನಲಕ್ಷ್ಮಿ ಜ್ಯೋತಿಷಿ ಮಾತುಗಳನ್ನು ಹೆಚ್ಚಾಗಿ ನಂಬುತ್ತಿದ್ದರು.

ಈ ಕ್ರಮದಲ್ಲಿ ಧನಲಕ್ಷ್ಮಿ ಜ.4ರಂದು ಮಗ ಶಶಿಕುಮಾರ್​ಗೆ ಕಾಲ್​ ಮಾಡಿ, ಜ್ಯೋತಿಷಿ ಮೂಲಕ ನನ್ನ ಬಗ್ಗೆ ತಿಳಿದಿದ್ದೇನೆ. ಅವರು ನಾನು ಕೈ ಅಥವಾ ಕಾಲುಗಳಿಲ್ಲದೇ ಬದಲಾಗುತ್ತೇನೆ ಅಂತಾ ಹೇಳಿದ್ದಾರೆ.

ಸಹೋದರಿ ಸುಗನ್ಯಾ ಜೊತೆ ನಾನು ಸಹ ಹಾಗೇ ಬದಲಾದ್ರೆ ನಿನಗೆ ಸಮಸ್ಯೆಗಳು ಎದುರಾಗುತ್ತವೆ. ಜ್ಯೋತಿಷಿ ಹೇಳಿದಂತೆ ಆದ್ರೆ ನಮ್ಮನ್ನು ನೋಡಿಕೊಳ್ಳುವವರು ಯಾರ ಇರಲ್ಲ. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡಿದ್ದೇವೆ ಅಂತಾ ಹೇಳಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ