Breaking News

ನೀ ಆ ಮನೇಲಿ ಏನೇನ್​ ಮಾಡ್ದೆ ಅಂತಾ ಗೊತ್ತು. ಬಿಜೆಪಿ ಶಾಸಕ-ಮಹಿಳಾ ಅಧಿಕಾರಿ ನಡುವಿನ ಸ್ಫೋಟಕ ಸಂಭಾಷಣೆ

Spread the love

ಕೊಪ್ಪಳ: ಕನಕಗಿರಿ ಶಾಸಕ ಬಸವರಾಜ ದಡೆಸುಗೂರ ಮತ್ತು ಕನಕಗಿರಿ ಸಿಡಿಪಿಒ ಮಹಿಳಾ ಅಧಿಕಾರಿ ಇಬ್ಬರೂ ಮದುವೆ ಆಗಿದ್ದಾರೆ ಎಂಬ ಸುದ್ದಿ ಜಿಲ್ಲಾದ್ಯಂತ ಹರಡಿ ಚರ್ಚೆಗೆ ಗ್ರಾಸವಾಗಿತ್ತು. ಈ ಸುದ್ದಿ ನಿಜವೇ ಅಥವಾ ಸುಳ್ಳೇ? ಎಂಬುದಕ್ಕೆ ಉತ್ತರವೇ ಸಿಕ್ಕಿಲ್ಲ.

ಇದರ ಬೆನ್ನಲ್ಲೇ ಶಾಸಕರು ಮತ್ತು ಮಹಿಳಾ ಅಧಿಕಾರಿ ಇಬ್ಬರೂ ಫೋನಿನಲ್ಲಿ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆ ವೈರಲ್​ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.

ಶಾಸಕರ ಜತೆ ದೂರವಾಣಿ ಮೂಲಕ ಸುದೀರ್ಘ ವಾಗ್ವಾದ ನಡೆಸಿದ್ದ ಮಹಿಳಾ ಅಧಿಕಾರಿ ಬಳಿಕ ಕಚೇರಿಯ ಬಾಗಿಲು ಮುಚ್ಚಿಕೊಂಡು ಸೀರೆ ಸೆರಗಿನಿಂದ ನೇಣು ಹಾಕಿಕೊಳ್ಳಲು ಯತ್ನಿಸಿದ್ದರು. ಇದನ್ನು ಕಂಡ ಸಿಬ್ಬಂದಿ ಬಾಗಿಲನ್ನು ಮುರಿದು ಅವರನ್ನು ಕೆಳಗಿಳಿಸಿ ಸಂತೈಸಿದ್ದರು. ಅಷ್ಟಕ್ಕೂ ಏನಾಯ್ತು ಈ ಮಹಿಳಾ ಅಧಿಕಾರಿಗೆ? ಶಾಸಕರಿಗೂ ಇವರಿಗೂ ಏನು ಸಂಬಂಧ? ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲವಾದರೂ ಅಂದು ಫೋನಿನಲ್ಲಿ ಇವರಿಬ್ಬರ ಮಾತುಕತೆ ನಡೆಸಿದ್ದರು ಎನ್ನಲಾದ ಸಂಭಾಷಣೆ ವಿವರ ಇಲ್ಲಿದೆ.
ಮಹಿಳಾ ಅಧಿಕಾರಿ: ಸರ್ ನಾನೊಬ್ಬಳೇ ಬರ್ತಾ ಇದೀನಿ, ದಯವಿಟ್ಟು ಇರಿಟೇಟ್ ಆಗೋ ತರಹ ಮಾಡಬೇಡಿ.
ಬಿಜೆಪಿ ಶಾಸಕ: ಇಲ್ಲಪ್ಪ.. ನೀನೊಬ್ನಳೇ..
ಮಹಿಳಾ ಅಧಿಕಾರಿ: ನಾನೊಬ್ಬಳೆ ಬರ್ತೀದಿನಿ, ನಾನು ತಲೆ ಕೆಟ್ಟು ಏನಾದ್ರೂ ಮಾಡಿದ್ರೆ ಮರ್ಯಾದೆ ಹೋಗತ್ತೆ. ತಲೆಕೆಟ್ಟು ಹೇಳತೀದಿನಿ..
ಶಾಸಕ: ಹೂಂ
ಮಹಿಳಾ ಅಧಿಕಾರಿ: ನನಗ ರೆಸ್ಪಾನ್ಸ್ ಮಾಡಿದ್ರೆ ಸರಿ, ಇಲ್ಲ ಕೆಟ್ಟ ಹೋಗತ್ತೆ, ಕೆಡಸಿ ಕೂರ್ತೀನಿ ಇಲ್ಲ ನಾನ ಬಿಡಲ್ಲ..
ಶಾಸಕ: ಹೂಂ ಎಲ್ಲಿಗೆ ಬರಾಕತ್ತಿ ಇವಾಗ
ಮಹಿಳಾ ಅಧಿಕಾರಿ: ನೀ ಎಲ್ಲಿದೀಯಾ ಅಲ್ಲಿ ಬರ್ತೀನಿ. ಅದೇನ ಆಗತ್ತೆ ಆಗಲಿ
ಶಾಸಕ: ದಡೇಸಗೂರಗೆ ಬರ್ತೀಯಾ
ಮಹಿಳಾ ಅಧಿಕಾರಿ: ದಡೇಸಗೂರುಗೆ ಅಲ್ಲ, ನಾನ ಹೇಳ್ತೀದೀನಿ, ನಾನ ದೊಡ್ಡರಂಪ‌ ಮಾಡಿ ಇಡ್ತೀನಿ
ಶಾಸಕ: ಎಲ್ಲಿ?
ಮಹಿಳಾ ಅಧಿಕಾರಿ: ಎಲ್ಲಿ ಆದ್ರೂ ಆಗಲಿ, ಕಾರಟಗಿ ಆಗಲಿ, ಕನಕಗಿರಿ ಆಗಲಿ, ಎಲ್ಲಿ ಆದ್ದೂ ಆಗಲಿ, ನಾನ ಯಾರಿಗೆ ಹೇಳಬೇಕು, ಏನ ಮಾಡಬಾರದು ನೋಡಿ‌ಮತ್ತೆ.. ನಾನ ಮರ್ಯಾದೆಯಿಂದ ಹೇಳ್ತೀದಿನಿ
ಶಾಸಕ: ಎಲ್ಲಿಗೆ ಬರ್ತೀದಿಯಾ? ನಾನ ಏನ ಬೇಡಾ ಅಂದಿದೀನಾ ಮಾತಾಡೋಕೆ, ಯಾಕೆ ಕಿರಕಿರಿ ‌ಮಾಡ್ತೀದಿ
ಮಹಿಳಾ ಅಧಿಕಾರಿ: ಯಾರ ಕಿರಿಕಿರಿ ಮಾಡಿದ್ದು? ನಾನಾ ನೀನಾ? ನನಗ ಟಾರ್ಚರ್ ಮಾಡಿದ್ದು ಯಾರು?
ಶಾಸಕ: ಕಿರಿಕಿರಿ ಕೊಡೊನಾ.. ನಾನಾ? ನೀನಾ?
ಮಹಿಳಾ ಅಧಿಕಾರಿ: ಕಾಲ್ ಎಲ್ಲ ರೆಕಾರ್ಡ್ ಇದೆ
ಶಾಸಕ: ನನಗೇನೂ ಗೊತ್ತಿಲ್ಲ
ಮಹಿಳಾ ಅಧಿಕಾರಿ: ಇದಕ್ಕೆ ಚಪ್ಪಲಿ ತಗೊಂಡ ಬಡೀತೀನಿ ಅಂದಿದ್ದು, ಅಡ್ಡ ಶೆಟಿಬೇಡಾ ಅಂದಿದ್ದು ನಾನು
ಶಾಸಕ: ಮುಂಜಾನೆ‌ಯಿಂದ ಬೈತೀದಿ
ಮಹಿಳಾ ಅಧಿಕಾರಿ: ನನ್ನ ಕಾಯಸಬೇಡಾ
ಶಾಸಕ: ಬರೀ ಬೈಸ್ಕೊಂಡ ಸಾಕಾಗಿದೆ
ಮಹಿಳಾ ಅಧಿಕಾರಿ: ಏನ್ ಮಾಡ್ತೀದಿ ಒಂದು ತಿಂಗಳಿಂದ? ನೀನು ಎಲ್ಲಿದ್ದೀಯಾ 10 ನಿಮಿಷದಲ್ಲಿ ಬಾ
ಶಾಸಕ: ದಡೇಸಗೂರುಗೆ ಬಾ
ಮಹಿಳಾ ಅಧಿಕಾರಿ: ನಾನು ನಿಮ್ಮ‌ ಅಪ್ಪನ ಹತ್ರ ಹೋಗ್ತೀನಿ. ನಮ್ಮ ಮನೇಲಿ ಹೇಳ್ತೀನಿ. ನೀನು ನಾಟಕ ಮಾಡ್ತೀಯಾ.. ನಾನ‌ ಕಾರಟಗಿ ಅಲ್ಲಿ ಇದೀನಿ
ಶಾಸಕ: ಆಫೀಸಲ್ಲಿ ಬೇಡ. ನಾನು ಬಾಡಿಗೆ ಅದೀವಿ ಅಲ್ಲಿ.. ಅಲ್ಲಿ ಬೇಡ
ಮಹಿಳಾ ಅಧಿಕಾರಿ: ನೀನು ಆ ಮನೆಯಲ್ಲಿ ಏನೇನ ಮಾಡೀದಿ ಅಂತಾ ಗೊತ್ತು
ಶಾಸಕ: ಅಲ್ಲಿ ನಾನ ಏನೂ ಮಾಡಿಲ್ಲ, ನೀನಾ ಮಾಡಿದ್ದ
ಮಹಿಳಾ ಅಧಿಕಾರಿ: ನಾನು ನಿನ್ನ ಸಹವಾಸ ಮಾಡಿ ಕೆಟ್ಟಿದ್ದು
ಶಾಸಕ: ನಾನು ಕ್ಷೇತ್ರದಲ್ಲಿ ಕೆಲಸ ಮಾಡ್ತೀನಿ, ಶಾಸಕ ನಿನ್ನ ಸಂಬಂಧ ಬರಲ್ಲ
ಮಹಿಳಾ ಅಧಿಕಾರಿ: ದೇವರ ಸಾಕ್ಷಿಯಾಗಿ ಹೇಳ್ತೀನಿ, ಕೆಟ್ಟ ಹೋಗತ್ತೆ
ಶಾಸಕ: ನಾನ ಹೇಳೋದಕೇಳ
ಮಹಿಳಾ ಅಧಿಕಾರಿ: ನಾನ ನಿನ್ನ ಮಾತ ಕೇಳಲ್ಲ ಇವತ್ತು


Spread the love

About Laxminews 24x7

Check Also

ಶಿಕ್ಷಕರ ದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ನೆಡದ ಕಾರ್ಯಕ್ರಮ

Spread the love ಶಿಕ್ಷಕರ ದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ನೆಡದ ಕಾರ್ಯಕ್ರಮ ಬೆಳಗಾವಿ ನಗರದಲ್ಲಿರುವ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ