ಲಕ್ನೋ, ಜನವರಿ 03: ಮುಂಬರಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.
ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ. ಟೈಮ್ಸ್ ನೌ ನವಭಾರತ್ ನಡೆಸಿದ VETO ಸಮೀಕ್ಷೆಯಲ್ಲಿ ಒಟ್ಟು 403 ಸೀಟುಗಳ ಪೈಕಿ 230-249 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.
2017 ಹಾಗೂ 2022ರ ಚುನಾವಣೆಯನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ.
ಪಕ್ಷ 2017 2022 ನಿರೀಕ್ಷೆ
ಬಿಜೆಪಿ 325 230-249
ಎಸ್‌ಪಿ 48 137-152
ಬಿಎಸ್‌ಪಿ 19 9-14
ಕಾಂಗ್ರೆಸ್ 7 4-7 ಸೀಟುಗಳನ್ನು ಗೆಲ್ಲಲ್ಲಿದೆ
ಸಮಾಜವಾದಿ ಪಕ್ಷವು 137 ರಿಂದ 152 ಸ್ಥಾನಗಳನ್ನು ಪಡೆಯುವುದಾಗಿ ಅಂದಾಜಿಸಲಾಗಿದೆ, ಬಿಎಸ್‌ಪಿ ಹಾಗೂ ಕಾಂಗ್ರೆಸ್ ಆಟದಿಂದ ಹೊರನಡೆಯಲಿದೆ. ಬಿಎಸ್‌ಪಿಯು 9-14 ಸೀಟುಗಳನ್ನು ಗೆಲ್ಲಲಿದೆ, ಕಳೆದ ಮೂರು ದಶಕಗಳಲ್ಲಿ ಇದೇ ಕಡಿಮೆ ಸ್ಥಾನಗಳಾಗಲಿವೆ. ಕಾಂಗ್ರೆಸ್ 2017ರಂತೆ ಒಂದಂಕಿಯಲ್ಲೇ ಇರಲಿದೆ.
ಕೋವಿಡ್-19 ರ ಎರಡನೇ ಅಲೆ ಮತ್ತು ಲಖಿಂಪುರ ಖೇರಿ ಘಟನೆಯ ನಂತರ ಬಿಜೆಪಿಯ ಇಮೇಜ್ ಹಾಳಾಗಿದೆ ಎಂದು ಬಹುತೇಕರು ಭಾವಿಸುತ್ತಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ.
ಬಿಜೆಪಿ ಶೇ.38.8ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಶೇ.34.4ರಷ್ಟು ಮತಗಳನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದೆ.
ಬಿಎಸ್‌ಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಕ್ರಮವಾಗಿ ಶೇ.14.1, ಶೇ.6.1 ಮತ್ತು ಶೇ.6.8ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದೆ. ನಿರೀಕ್ಷೆಗಳು ನಿಖರವಾದುದಾದರೆ, ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ 1985 ರಿಂದ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದ ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ.
ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಕೇವಲ 51 ಪ್ರತಿಶತದಷ್ಟು ಜನರು ಪ್ರಸ್ತುತ ಸಿಎಂ ಅವರ ಕೆಲಸದಿಂದ ತೃಪ್ತರಾಗಿದ್ದಾರೆ ಎಂದು ವರದಿ ಮಾಡಿದ್ದಾರೆ. ಇದು ಮುಖ್ಯಮಂತ್ರಿಯಾಗಿ ಆದಿತ್ಯನಾಥ್‌ಗೆ ಒಲವು ತೋರುವವರ ಶೇಕಡಾವಾರು ಪ್ರಮಾಣದೊಂದಿಗೆ (ಶೇ. 52) ಹೊಂದಿಕೆಯಾಗುತ್ತದೆ.
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 34 ರಷ್ಟು ಜನರು ಆದಿತ್ಯನಾಥ್ ಅವರ ಕೆಲಸದಿಂದ ತೃಪ್ತರಾಗಿಲ್ಲ ಎಂದು ಹೇಳಿದ್ದಾರೆ, ಆದರೆ ಶೇ. 15 ರಷ್ಟು ಜನರು ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಏಪ್ರಿಲ್-ಮೇ 2021 ರಲ್ಲಿ COVID-19 ಸಾಂಕ್ರಾಮಿಕದ ಎರಡನೇ, ವಿನಾಶಕಾರಿ ಅಲೆಯ ನಂತರ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಚಿತ್ರಣವು ಕುಸಿದಿದೆ ಎಂದು ಸಮೀಕ್ಷೆಗೆ ಒಳಗಾದವರಲ್ಲಿ 73 ಪ್ರತಿಶತದಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.