ಬೆಳಗಾವಿ ಜಿಲ್ಲಾಧಿಕಾರಿಯಾಗಿ ಮತ್ತೆ ಮಹಾಂತೇಶ ಹಿರೇಮಠ್ ಅವರನ್ನೇ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿ ಎಂಎಲ್ಸಿ ಚುನಾವಣೆ ಹಿನ್ನೆಲೆ ಡಿಸಿ ಮಹಾಂತೇಶ ಹಿರೇಮಠರನ್ನು ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ವರ್ಗಾವಣೆ ಮಾಡಿ ಆರ್.ವೆಂಕಟೇಶಕುಮಾರ್ ಅವರನ್ನು ಡಿಸಿಯಾಗಿ ರಾಜ್ಯ ಸರ್ಕಾರ ತಾತ್ಕಾಲಿಕ ಅವಧಿಗೆ ನೇಮಕ ಮಾಡಿತ್ತು. ಇದೀಗ ಪುನಃ ಮಹಾಂತೇಶ ಹಿರೇಮಠ್ ಅವರನ್ನೆ ಬೆಳಗಾವಿ ಡಿಸಿಯಾಗಿ ನಿಯುಕ್ತಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ