Breaking News

ಒಂದೇ ದಿನ 60 ಸಾವಿರ ಮೆಟ್ರಿಕ್‌ ಟನ್‌ ಕಬ್ಬು ನುರಿಸಿದ ನಿರಾಣಿ ಶುಗರ್

Spread the love

ಬಾಗಲಕೋಟೆ: ದೇಶದ ಅತಿ ದೊಡ್ಡ ಸಕ್ಕರೆ ಸಮೂಹ ಸಂಸ್ಥೆಗಳಲ್ಲಿ ಒಂದಾದ ಜಿಲ್ಲೆಯ ಮುಧೋಳದ ನಿರಾಣಿ ಉದ್ಯಮ ಸಮೂಹ ಸಂಸ್ಥೆ ಒಂದೇ ದಿನದಲ್ಲಿ 60,975 ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ಮೂಲಕ ಹೊಸ ದಾಖಲೆ ಬರೆದಿದೆ. ದಕ್ಷಿಣ ಭಾರತದಲ್ಲಿ ಒಂದೇ ದಿನದಲ್ಲಿ ಸಕ್ಕರೆ ಉದ್ಯಮ ಸಮೂಹವೊಂದು ಅತ್ಯಧಿಕ ಕಬ್ಬು ನುರಿಸಿದ ದಾಖಲೆ ಇದಾಗಿದೆ ಎಂದು ಸಮೂಹದ ತಾಂತ್ರಿಕ ಸಲಹೆಗಾರ ಆರ್‌.

ವಿ. ವಟ್ನಾಳ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯಶಸ್ಸು ಬಾಗಲಕೋಟೆ, ಬೆಳಗಾವಿ, ವಿಜಯಪುರ ಹಾಗೂ ಮಂಡ್ಯ-ಮೈಸೂರು ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಸಲ್ಲುತ್ತದೆ. ಕಾರ್ಖಾನೆ ಅಧಿಕಾರಿಗಳು ಹಾಗೂ ಕಾರ್ಮಿಕ ವರ್ಗದ ಅವಿರತ ಶ್ರಮದ ಪ್ರತಿಫಲವೇ ಈ ಸಾಧನೆಯಾಗಿದೆ ಎಂದರು. ಡಿ.30ರಂದು ಮುಧೋಳದ ನಿರಾಣಿ ಶುಗರ್ಸ್‌ 23,187 ಮೆಟ್ರಿಕ್‌ ಟನ್‌, ಸಾಯಿಪ್ರಿಯಾ ಶುಗರ್ಸ್‌ 16,393 ಮೆಟ್ರಿಕ್‌ ಟನ್‌, ಎಂಆರ್‌ಎನ್‌ ಶುಗರ್ಸ್‌ 8,623 ಮೆಟ್ರಿಕ್‌ ಟನ್‌, ಕೇದಾರನಾಥ ಶುಗರ್ಸ್‌ 6,048 ಮೆಟ್ರಿಕ್‌ ಟನ್‌, ಬಾದಾಮಿ ಶುಗರ್ಸ್‌ 4,124 ಮೆಟ್ರಿಕ್‌ ಟನ್‌ ಹಾಗೂ ಪಾಂಡವಪುರದ ಶುಗರ್ಸ್‌ 2,599 ಮೆಟ್ರಿಕ್‌ ಟನ್‌ ಸೇರಿ ನಿರಾಣಿ ಸಮೂಹದ 6 ಕಾರ್ಖಾನೆಗಳು ಒಟ್ಟು 60,975 ಮೆಟ್ರಿಕ್‌ ಟನ್‌ ಕಬ್ಬು ನುರಿಸಿವೆ ಎಂದರು.

ಕೆರಕಲಮಟ್ಟಿ, ಬಾದಾಮಿ ಹಾಗೂ ಎಂಆರ್‌ಎನ್‌ ಯುನಿಟ್‌ ವ್ಯವಸ್ಥಾಪಕ ನಿರ್ದೇಶಕ ರವಿ ಪಾಟೀಲ ಮಾತನಾಡಿ, ಈ ಮೈಲುಗಲ್ಲು ಸ್ಥಾಪಿಸಲು ವಿಶೇಷವಾದ ಪೂರ್ವತಯಾರಿ ಅವಶ್ಯಕವಾಗಿತ್ತು. ನುರಿತ ತಂತ್ರಜ್ಞರ ತಂಡದ ವ್ಯವಸ್ಥಿತ ಕಾರ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಯಿತು.

ಗರಿಷ್ಠ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಸರಬರಾಜು ಮಾಡಲು ಕಬ್ಬು ವಿಭಾಗವು ಒಂದು ತಂಡವಾಗಿ ಕೆಲಸ ಮಾಡಿತು. ಯಂತ್ರೋಪಕರಣಗಳ ನಿಗದಿತ ನಿರ್ವಹಣೆ, ಸೂಕ್ತ ಮುಂಜಾಗ್ರತೆ ಕ್ರಮ ತಾಂತ್ರಿಕ ವರ್ಗದ ಬದ್ಧತೆ, ಜೀರೋ ಹವರ್‌ ಸ್ಟಾಪೇಜ್‌, ಕಾರ್ಮಿಕರು ಹಾಗೂ ಯಂತ್ರೋಪಕರಣಗಳ ಸುರಕ್ಷತೆಗೆ ಒತ್ತು ನೀಡಿರುವುದು. ಹೆಚ್ಚುವರಿ ಮಾನವ ಸಂಪನ್ಮೂಲ ಹಾಗೂ ಸಲಕರಣೆಗಳ ನಿಯೋಜನೆ ಹಾಗೂ ಅಧಿಕಾರಿಗಳು, ಕಾರ್ಮಿಕರ ಅಚ್ಚುಕಟ್ಟು ನಿರ್ವಹಣೆ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ತಾಂತ್ರಿಕ ನಿರ್ದೇಶಕ ಎಂ.ಎಸ್‌.ಹತ್ತಿಕಾಳ ಮಾತನಾಡಿ, ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾರ್ಗದರ್ಶನದಲ್ಲಿ ಎಲ್ಲ ತಾಂತ್ರಿಕ ಪರಿಮಾಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದರೊಂದಿಗೆ ಈ ಸಾಧನೆ ಮಾಡಿದ್ದು ಅತ್ಯಂತ ವಿಶೇಷವಾಗಿದೆ. ಮಿಲ್‌ ಇಕ್ಸ್‌ಟ್ರಾಕ್ಷನ್‌ನಲ್ಲಿಯೂ ಅತ್ಯುತ್ತಮ ನಿರ್ವಹಣೆ ತೋರುವುದರೊಂದಿಗೆ ಬಯೋಗ್ಯಾಸ್‌ ಮೌಶ್ಚರ್‌ ಸೇರಿದಂತೆ ಎಲ್ಲ ರೀತಿಯ ತಾಂತ್ರಿಕ ಹಾನಿಗಳಿಗೆ ಕಡಿವಾಣ ಹಾಕಿರುವುದು ಗಮನಾರ್ಹವಾಗಿದೆ. ಪ್ರತಿ ಟನ್‌ ಕಬ್ಬು ನುರಿಸುವಾಗಲು ಕಡಿಮೆ ಪ್ರಮಾಣದ ಹಬೆ ಮತ್ತು ವಿದ್ಯುತ್‌ನ್ನು ಬಳಸಿಕೊಂಡಿರುವುದು ಅತ್ಯುತ್ತಮ ನಿರ್ವಹಣೆ ತೋರಿರುವುದಕ್ಕೆ ನಿದರ್ಶನವಾಗಿದೆ.

ರೈತರ ಸಮರ್ಪಕ ಕಬ್ಬು ಪೂರೈಕೆ, ಸಕ್ಕರೆ, ವಿದ್ಯುತ್‌, ಎಥೆನಾಲ್‌ ಸೇರಿದಂತೆ ಎಲ್ಲ ಸಹ ಉತ್ಪನಗಳ ಉತ್ಪಾದನೆ ಗಾತ್ರದ ಸರಾಸರಿ ಹೆಚ್ಚಳದಲ್ಲಿಯೂ ಅತ್ಯುತ್ತಮ ಫಲಿತಾಂಶ ದೊರಕಿದ್ದು ಈ ಸಾಧನೆಯ ವೈಶಿಷ್ಟÂವಾಗಿದೆ ಎಂದರು.


Spread the love

About Laxminews 24x7

Check Also

ಭೂಮಿ‌ ಇರೋವರೆಗೂ ಬಸವಣ್ಣನವರ ವಿಚಾರಧಾರೆಗಳನ್ನ ಕಾಪಾಡಬೇಕು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಸತೀಶ ಜಾರಕಿಹೊಳಿ

Spread the loveಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ