Breaking News

ಕೊಪ್ಪಳದಲ್ಲಿ ಕಾಂಗ್ರೆಸ್​ಗೆ ಬಲ, ಕಮಲಕ್ಕಿಲ್ಲ ಸ್ಪಷ್ಟ ಗರಿ: ಜೆಡಿಎಸ್- ಪಕ್ಷೇತರರೇ ನಿರ್ಣಾಯಕ

Spread the love

ಕೊಪ್ಪಳ: ಜಿಲ್ಲೆಯ 5 ನಗರ,‌ ಸ್ಥಳೀಯ‌ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಎರಡರಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಬಂದರೆ, ಉಳಿದ ಮೂರರಲ್ಲಿ ಜೆಡಿಎಸ್ ಹಾಗೂ ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ.ಕಾರಟಗಿ ಪುರಸಭೆಯ 23 ಸ್ಥಾನಗಳಲ್ಲಿ ಬಿಜೆಪಿ -11, ಕಾಂಗ್ರೆಸ್-11, ಜೆಡಿಎಸ್-1 ಸ್ಥಾನ ಪಡೆದಿದೆ.

ಕೈ-ಕಮಲ‌ ಸಮಬಲ ಸಾಧಿಸಿದ್ದು,

ಜೆಡಿಎಸ್ ನಿರ್ಣಾಯಕ ಪಾತ್ರವಹಿಸಲಿದೆ. ಭಾಗ್ಯನಗರ ಪಟ್ಟಣದ 19 ಸ್ಥಾನಗಳಲ್ಲಿ ಕಾಂಗ್ರೆಸ್-8, ಬಿಜೆಪಿ-9, ಇಬ್ಬರು ಪಕ್ಷೇತರರು ಗೆದ್ದಿದ್ದಾರೆ. ಬಿಜೆಪಿ ಹೆಚ್ಚು ಸ್ಥಾನ ಬಪಡೆದರೂ ಬಹುಮತಕ್ಕೆ ಒಂದು ಸ್ಥಾನ ಕೊರತೆಯಿದ್ದು, ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ‌.

ಕನಕಗಿರಿ ಪಪಂನ 17 ಸ್ಥಾನಗಳಲ್ಲಿ ಕಾಂಗ್ರೆಸ್- 12, ಬಿಜೆಪಿ-5 ಸ್ಥಾನ ಪಡೆದಿದ್ದು, ಕಾಂಗ್ರೆಸ್​ಗೆ ಸರಳ ಬಹುಮತ ದೊರೆತಿದೆ. ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಸ್ವಕ್ಷೇತ್ರ ಕುಕನೂರು ಪಪಂನ 19 ಸ್ಥಾನಗಳಲ್ಲಿ ಕಾಂಗ್ರೆಸ್- 10 ಸ್ಥಾನ ಪಡೆದರೆ, ಬಿಜೆಪಿ- 9 ಸ್ಥಾನ ಪಡೆದಿದ್ದು, ಸಚಿವರಿಗೆ ಮುಖಭಂಗವಾಗಿದೆ. ಕಾಂಗ್ರೆಸ್​ಗೆ ಸರಳ ಬಹುಮತ ಒಲಿದಿದೆ. ತಾವರಗೇರಾ ಪಪಂನಲ್ಲಿ ಕಾಂಗ್ರೆಸ್-8, ಬಿಜೆಪಿ- 7, ಮೂವರು ಪಕ್ಷೇತರರು ಗೆಲುವು ‌ಸಾಧಿಸಿದ್ದಾರೆ. ಇಲ್ಲಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ.

ಒಟ್ಟಾರೆ 96 ಸ್ಥಾನಗಳಲ್ಲಿ 49 ಸ್ಥಾನ ಪಡೆವ ಮೂಲಕ ಕಾಂಗ್ರೆಸ್​ಗೆ ಮುನ್ನಡೆಯಾಗಿದೆ. ಬಿಜೆಪಿ 41 ಸ್ಥಾನ ಪಡೆದು ಎರಡನೇ ಸ್ಥಾನಕ್ಕಿಳಿದರೆ, ಜೆಡಿಎಸ್ ಒಂದು ಹಾಗೂ ಪಕ್ಷೇತರರು ಐದು ಸ್ಥಾನ ಪಡೆದಿರುವುದು ವಿಶೇಷ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ