ಕೃಷ್ಣೈಕ್ಯರಾಗಿರುವ ಉಡುಪಿ ಪೇಜಾವರ ಮಠದ ಶ್ರೀಗಳ ಬಗ್ಗೆ ಹೇಳಿಕೆಯನ್ನು ನೀಡಿ, ಭಾರೀ ವಿವಾದವನ್ನೇ ಎದುರು ಹಾಕಿಕೊಂಡಿರುವ ಗಂಗರಾಜು ಆಲಿಯಾಸ್ ಹಂಸಲೇಖ ಅವರ ಬಗ್ಗೆ ಹೊಸ ಸುದ್ದಿಯೊಂದು ಗಿರಿಗಿಟ್ಲೆಯಾಡುತ್ತಿದೆ. ಅದು ರಾಜಕೀಯಕ್ಕೆ ಸಂಬಂಧ ಪಟ್ಟದ್ದು..
ತಮ್ಮ ಸೂಪರ್ ಹಿಟ್ ಸಂಗೀತ ಸಂಯೋಜನೆಯ ಮೂಲಕ ಚಿರಪಚಿತರಾಗಿರುವ ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಯ ನಂತರ ಮನೆಮಾತಾದರು.
ಈಗ ಹರಿದಾಡುತ್ತಿರುವ ಸುದ್ದಿಯನ್ನು ಅವಲೋಕಿಸುವುದಾದರೆ, ರಾಜಕೀಯ ಪ್ರವೇಶಕ್ಕೆ ಮುನ್ನ ಇಂತಹದೊಂದು ಪೂರ್ವಭಾವಿ ಕಾಂಟ್ರವರ್ಸಿಯ ಅವಶ್ಯಕತೆ ಇತ್ತಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ ಅಂದರೆ ಅದು ಜನರ ತಪ್ಪಲ್ಲ.
ಹಂಸಲೇಖ ಅವರ ಹೇಳಿಕೆಯಿಂದ ಪರವಿರೋಧ ಚರ್ಚೆ/ನಿಲುವುಗಳು ಸಾಕಷ್ಟು ನಡೆದಿದ್ದು ಒಂದು ಕಡೆಯಾದರೆ, ಒಂದು ವರ್ಗದ ಜನ ಅವರ ಪರವಾಗಿ ನಿಂತದ್ದು ಇನ್ನೊಂದು ಕಡೆ. ಆ ನಿಟ್ಟಿನಲ್ಲಿ ನೋಡುವುದಾದರೆ, ರಾಜಕೀಯ ಪಕ್ಷಗಳು ಅವರನ್ನು ಸಂಪರ್ಕಿಸಿದರೆ ಅದು ಸ್ವಾಭಾವಿಕ ರಾಜಕಾರಣ.
ಇತ್ತೀಚಿನ ಅಂದರೆ ಒಂದು ವಾರದ ರಾಜಕೀಯ ವಿದ್ಯಮಾನವನ್ನು ಗಮನಿಸುವುದಾರೆ, ಹಂಸಲೇಖ ಅವರು ರಾಜಕೀಯ ಪ್ರವೇಶಕ್ಕೆ ವೇದಿಕೆಯನ್ನು ಸಿದ್ದ ಮಾಡಿಕೊಳ್ಳುತ್ತಿದ್ದಾರೆ ಎಂದು ಯಾರಾದರೂ ಅರ್ಥ ಮಾಡಿಕೊಳ್ಳಬಹುದು. ಕೆಲವೊಂದು ಅನಧಿಕೃತ ಸುದ್ದಿಯ ಪ್ರಕಾರ, ಅವರು ಬೆಂಗಳೂರು ನಗರ ವ್ಯಾಪ್ತಿಯಿಂದಲೇ ಸ್ಪರ್ಧಿಸಲಿದ್ದಾರೆ ಎನ್ನುವುದು.
ಹಂಸಲೇಖ ಅವರನ್ನು ಧ್ವನಿಸುರುಳಿಗಾಗಿ ಬರುವಂತೆ ಆಮಂತ್ರಣ ನೀಡುತ್ತಾರೆ
ಒಂದೆರಡು ದಿನದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಂಸಲೇಖ ಅವರನ್ನು ಧ್ವನಿಸುರುಳಿಗಾಗಿ ಬರುವಂತೆ ಆಮಂತ್ರಣ ನೀಡುತ್ತಾರೆ. ಹಂಸಲೇಖ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅಲ್ಲಿ ವಿಜಯ್ ಪ್ರಕಾಶ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಕೂಡಾ ಹಾಜರಿರುತ್ತಾರೆ. ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದ ಹಾಡಿನ ಬಿಡುಗಡೆ ಕಾರ್ಯಕ್ರಮ ಅದಾಗಿತ್ತು.
ಮಹತ್ವಾಕಾಂಕ್ಷೆಯ ಮೇಕೆದಾಟು ಪಾದಯಾತ್ರೆಯ ವಿಚಾರ
ಕನ್ನಡ, ಕರ್ನಾಟಕ, ಕಾವೇರಿ, ಕೃಷ್ಣಾ ಏನೇ ಇರಲಿ, ರಾಜ್ಯ ಮತ್ತು ಭಾಷೆಗೆ ಸಂಬಂಧಿಸಿದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಆದರೆ, ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಮೇಕೆದಾಟು ಪಾದಯಾತ್ರೆಯ ವಿಚಾರದಲ್ಲಿ ರಾಜಕೀಯದ ಘಾಟು ಜೋರಾಗಿರುವುದರಿಂದ ಹಂಸಲೇಖ ಅವರು ಡಿಕೆಶಿ ಆಹ್ವಾನಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಎಲ್ಲಾ ಗುಸುಗುಸು ಸುದ್ದಿಗಳಿಗೆ ಕಾರಣವಾಗಿದೆ. ಇದು ಒಂದು ಕಡೆ, ಇನ್ನೊಂದು ಕಡೆ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದು..
ರಾಜ್ಯದ ಮಕ್ಕಳಿಗೆ ಹಾಲು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಾಹಿತಿ ಎಸ್.ಜಿ.ಸಿದ್ದರಾಮಯ್ಯನವರ ‘ಯರೆಬೇವು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಂಸಲೇಖ ಭಾಗವಹಿಸಿದ್ದರು. “ಧರ್ಮೋಕ್ರಸಿಯನ್ನು ಪಕ್ಕಕ್ಕೆ ಸರಿಸಿ, ಡೆಮೊಕ್ರಸಿ ಬರಲಿ, ನಾನು ಭಯಸ್ತ ಅಲ್ಲ, ಮಾಗಡಿ ರೋಡ್‌ನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ದೊಡ್ಡ ತಂಡ ಕಟ್ಕೊಂಡಿದ್ದೆ, ಚರಿತ್ರೆಯೇ ಇದೆ. ರಾಜ್ಯದ ಮಕ್ಕಳಿಗೆ ಹಾಲು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ನನಗೂ ಹಾಲು ಕೊಟ್ಟರು, ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು”ಎಂದು ಹಂಸಲೇಖ ಅವರು ಆ ಕಾರ್ಯಕ್ರಮದಲ್ಲಿ ಹೇಳಿದ್ದರು.
ಹಂಸಲೇಖ ಅವರು ವಾಸ್ತವಾಂಶವನ್ನು ಹೇಳಿದ್ದಾರೆ