ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಿಂದ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.
ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಟನ ನಡೆಸಿದ 39 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಮೊದಲು ವಾರ್ನಿಂಗ್ ನೀಡಿದರೂ ಮತ್ತೆ ರಸ್ತೆಗಿಳಿದವರ ಮೇಲೆ ಪೊಲೀಸರು ಗರಂ ಆಗಿದ್ದು, ಪಶ್ಚಿಮ ವಿಭಾಗದಲ್ಲಿ 37 ದ್ವಿಚಕ್ರ ವಾಹನಗಳು, 2 ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಇನ್ನು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಇಂದಿನಿಂದ ಜಕ್ಕೂರು, ಕೆಆರ್ ಮಾರ್ಕೆಟ್ ಸೇರಿದಂತೆ ನಗರದ ಎಲ್ಲಾ ಫ್ಲೈ ಓವರ್ ಬಂದ್ ಆಗಲಿದ್ದು, ಅಗತ್ಯವಿರುವ ವಾಹನಗಳು ನಿರ್ಧಿಷ್ಟ ಕಾರಣ ನೀಡಿ ಸರ್ವಿಸ್ ರೋಡ್ ಮುಖಾಂತರ ತೆರಳಲು ಅವಕಾಶ ನೀಡಲಾಗಿದೆ.