Breaking News

ಪೊಲೀಸರೊಂದಿಗೆ ರಂಪಾಟ ನಡೆಸಿದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್

Spread the love

ಬೆಂಗಳೂರು: ಎಂ.ಜಿ.ರಸ್ತೆಯಲ್ಲಿ ಓಡಾಡುತ್ತಿದ್ದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರಿಗೆ ಮನೆಗೆ ತೆರಳಿ ಎಂದು ಹೇಳಿದ್ದಕ್ಕೆ ಪೊಲೀಸರೊಂದಿಗೆ ರಂಪಾಟ ನಡೆಸಿರುವ ಆರೋಪ ಕೇಳಿಬಂದಿದೆ.‌ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದಿದ್ದಕ್ಕೆ ಪುಂಡಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.‌ ಮತ್ತೊಂದೆಡೆ ಮಾಧ್ಯಮವೊಂದರ ಕ್ಯಾಮೆರಾ ಹೊಡೆದು ಹಾಕುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಲಾಂಗ್ ಡ್ರೈವ್ ಹೊರಟಿದ್ದವನ ಕಾರು ಸೀಜ್ : ನೈಟ್ ಕರ್ಫ್ಯೂ ಇದ್ದರೂ ವ್ಯಕ್ತಿಯೊಬ್ಬ ಚಾಲನೆ ಮಾಡುತ್ತಿದ್ದ ಹುಂಡೈ ಕ್ರೇಟಾ ಕಾರನ್ನು ಉಪ್ಪಾರಪೇಟೆ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಗುಜರಾತ್ ಮೂಲದ ರಾಶೀಶ್ ಕುಮಾರ್ ಎಂಬಾತನ ಕಾರನ್ನು ಪೊಲೀಸರು‌ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಹೆಚ್ಎಸ್ಆರ್ ಲೇಔಟ್​​ನಿಂದ ಮೆಜೆಸ್ಟಿಕ್ ಬಂದಿದ್ದ ಚಾಲಕ ನಂದಿಬೆಟ್ಟಕ್ಕೆ ನೈಟ್ ಔಟ್ ಹೋಗಲು ಮುಂದಾಗಿದ್ದನು. ಈ ವೇಳೆ ಮೆಜೆಸ್ಟಿಕ್​ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಉಪ್ಪಾರಪೇಟೆ ಸಂಚಾರಿ ಪೊಲೀಸರ ಕೈಗೆ ಚಾಲಕ ಸಿಕ್ಕಿಬಿದ್ದಿದ್ದಾನೆ. ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಗೊತ್ತಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಪ್ರಕರಣದ ಅಡಿ ಉಪ್ಪಾರಪೇಟೆ ಪೊಲೀಸರು ಕೇಸ್ ದಾಖಲಿಸಿ, ಕಾರನ್ನು ಸೀಜ್ ಮಾಡಿದ್ದಾರೆ.

ಪೊಲೀಸರಿಂದ ತಪಾಸಣೆ: ಒಮಿಕ್ರಾನ್ ಸೋಂಕು ಭೀತಿಯಿಂದ ಜನದಟ್ಟಣೆ ನಿಯಂತ್ರಿಸಲು ಮಂಗಳವಾರದಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಪೊಲೀಸರು ರಾತ್ರಿ 10 ಗಂಟೆ ಆಗುತ್ತಿದ್ದಂತೆ ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಿದರು‌.

ಮೊದಲ ದಿನವಾಗಿದ್ದರಿಂದ 9 ಗಂಟೆಯಿಂದಲೇ ಹೊಯ್ಸಳ ಮೂಲಕ ಅಂಗಡಿ-ಮುಂಗಟ್ಟು ಮುಚ್ಚುವಂತೆ ಮೈಕ್​ನಲ್ಲಿ ಪೊಲೀಸರು ಅನೌನ್ಸ್ ಮಾಡಿದರು. ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆಯಂತೆ ಅನಾವಶ್ಯಕವಾಗಿ ಓಡಾಡುತ್ತಿದ್ದವರಿಗೆ ವಾರ್ನ್ ಮಾಡಿ ಬಿಟ್ಟು ಕಳುಹಿಸುವುದು ಕೂಡಾ ಕಂಡು ಬಂತು.


Spread the love

About Laxminews 24x7

Check Also

ಬಿಎಂಐಸಿ ಯೋಜನೆಯನ್ನು ಮರುಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

Spread the loveಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್‌ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು ಮೈಸೂರು ಮೂಲ ಸೌಕರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ