Breaking News

ನನ್ನ ಪೈಜಾಮ ಮಾರಿಯಾದರೂ ಧೋನಿಯನ್ನು ಖರೀದಿಸಲು ಸಿದ್ಧ ಎಂದಿದ್ದ ಶಾರುಖ್

Spread the love

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ನಂತರವೂ ಬಹಳ ಜನಪ್ರಿಯರಾಗಿದ್ದಾರೆ ಮತ್ತು ಎಲ್ಲರೂ ಅವರನ್ನು ವಿಶ್ವದ ಅತ್ಯುತ್ತಮ ನಾಯಕ ಎಂದು ಪರಿಗಣಿಸುತ್ತಾರೆ. 40ರ ಹರೆಯದಲ್ಲಿಯೂ ಕಳೆದ ಐಪಿಎಲ್ ಋತುವಿನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಈ ಬಾರಿಯೂ ಸಹ, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2022 ಸೀಸನ್‌ಗಾಗಿ ಮಹೇಂದ್ರ ಸಿಂಗ್ ಧೋನಿಯನ್ನು ಉಳಿಸಿಕೊಂಡಿದೆ. ಆದರೆ, ಬಾಲಿವುಡ್‌ನ ಕಿಂಗ್ ಖಾನ್ ಎಂದು ಕರೆಯಲ್ಪಡುವ ಶಾರುಖ್ ಖಾನ್, ಮಹೇಂದ್ರ ಸಿಂಗ್ ಧೋನಿಗಾಗಿ ತಮ್ಮ ಪೈಜಾಮಾವನ್ನು ಮಾರಾಟ ಮಾಡಲು ಸಹ ಒಪ್ಪಿಕೊಂಡ ಸಮಯವಿತ್ತು.

 

ನನ್ನ ಪೈಜಾಮ ಮಾರಿಯಾದರೂ ಧೋನಿಯನ್ನು ಖರೀದಿಸಲು ಸಿದ್ಧ:
ಐಪಿಎಲ್ 2017 (IPL 2017)ರ ಹರಾಜಿನ ಸಂದರ್ಭದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಮಾಲೀಕ ಶಾರುಖ್ ಖಾನ್ (Shahrukh khan) ಅವರು ಅತ್ಯಂತ ಯಶಸ್ವಿ ಭಾರತೀಯ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರನ್ನು ಖರೀದಿಸುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು, 2017 ನಲ್ಲಿ ತಮ್ಮ ತಂಡಕ್ಕಾಗಿ ಧೋನಿಯಂತಹ ಡೈನಾಮಿಕ್ ನಾಯಕನನ್ನು ಖರೀದಿಸಲು ಅವರು ತಮ್ಮ ಬಟ್ಟೆಗಳನ್ನು ಮಾರಾಟ ಮಾಡಲೂ ಸಹ ಸಿದ್ಧ ಎಂದು ಹೇಳಿದ್ದರು.

ಧೋನಿ ಮೇಲಿನ ಅಭಿಮಾನಿಗಳ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ:
ಯಾರ್ ಮೈನ್ ತೋ ಉಸ್ಕೊ ಅಪ್ನಾ ಪೈಜಾಮ ಬೆಚ್ ಕೆ ಭಿ ಖರಿದ್ ಲುನ್, ವೋ ಆಯೆ ತೋ ಹರಾಜ್ ಮೇ (ಮಹೇಂದ್ರ ಸಿಂಗ್ ಧೋನಿ ಅವರು ಹರಾಜಿಗೆ ಬಂದರೆ, ನನ್ನ ಪೈಜಾಮವನ್ನು ಮಾರಿಯಾದರೂ ನಾನು ಅವರನ್ನು ಖರೀದಿಸುತ್ತೇನೆ) ಎಂದು ಶಾರುಖ್ ಖಾನ್ (Shahrukh khan) ಹೇಳಿದ್ದರು. ವಾಸ್ತವವಾಗಿ, ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ಮೇಲೂ ಧೋನಿ ಮೇಲಿನ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಈಗಲೂ ಜನರು ಅವರನ್ನು ಮೈದಾನದಲ್ಲಿ ನೋಡಲು ಬಯಸುತ್ತಿದ್ದಾರೆ. ಧೋನಿ ಒಬ್ಬ ಕ್ರಿಕೆಟಿಗನಾಗಿದ್ದು, ಬಾಲಿವುಡ್ ತಾರೆಯರೂ ಕೂಡ ಅವರ ಅಭಿಮಾನಿಗಳಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಒಬ್ಬ ಶ್ರೇಷ್ಠ ಕ್ರಿಕೆಟಿಗ ಮಾತ್ರವಲ್ಲದೆ ಧೀರ ಸೇನಾಧಿಕಾರಿಯೂ ಹೌದು. ಕಾಶ್ಮೀರ ಕಣಿವೆಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ