Home / ರಾಜಕೀಯ / ಮಾಗಡಿ ರಸ್ತೆಯಲ್ಲಿ ಪೋಲಿ ಆಟ ಆಡಿ ಬಂದವನು ನಾನು- ಹಂಸಲೇಖ

ಮಾಗಡಿ ರಸ್ತೆಯಲ್ಲಿ ಪೋಲಿ ಆಟ ಆಡಿ ಬಂದವನು ನಾನು- ಹಂಸಲೇಖ

Spread the love

ಬೆಂಗಳೂರು: ನನಗೇನು ಭಯ! ಮಾಗಡಿ ರಸ್ತೆಯಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದಿದ್ದೇನೆ. ಅದಕ್ಕೊಂದು ಚರಿತ್ರೆಯೇ ಇದೆ ಎಂದು ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.

ಬಹುರೂಪಿ ಪ್ರಕಾಶನ ಮತ್ತು ಲಂಡನ್ ನ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೊಫೆಸರ್ ಎಸ್.

ಜಿ. ಸಿದ್ದರಾಮಯ್ಯ ಅವರ ಆತ್ಮಕಥೆ ‘ಯರೆಬೇವು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ಇತ್ತೀಚಿಗೆ ಒಂದು ವಿವಾದವಾಗಿ ನನಗೆ ಗೊತ್ತಿಲ್ಲದ ಸಮುದಾಯದವರೆಲ್ಲ ನನ್ನ ಜೊತೆಗೆ ನಿಂತರು. ಹೀಗೆಲ್ಲ ಆಗುತ್ತದೆ ಎಂದು ನನಗೆ ಗೊತ್ತೇ ಇರಲಿಲ್ಲ. ಈ ಹಿಂದೆ ಬರೆದುಕೊಳ್ಳದೇ ಭಾಷಣ ಮಾಡಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಜೀವನದಲ್ಲಿ ಮೊದಲು ಬರೆದುಕೊಂಡು ಮಾತನಾಡುತ್ತಿದ್ದೇನೆ ಎಂದರು.

ನಾನು ಭಯಸ್ತನಲ್ಲ, ರೋಡಿನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು. ಆದರೆ, ನುಡಿದರೆ ಮುತ್ತಿನ ಹಾರದಂತೆ ಇರಬೇಕು. ನುಡಿ ಕೆಲವೊಮ್ಮೆ ಸ್ಫಟಿಕದ ಸಲಾಕೆಯೂ ಆಗುತ್ತದೆ. ನಾನು ವಿವಾದದಲ್ಲಿ ಸಿಲುಕಿದಾಗ ನನ್ನ ರಕ್ಷಣೆಗೆ ಬಂದವರು ಪ್ರೊ. ಸಿದ್ದರಾಮಯ್ಯ ಎಂದು ಸ್ಮರಿಸಿದರು.

ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಸಿಎಂ ಆಗಲಿ. ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರಸಿಯನ್ನು ಸಿದ್ದರಾಮಯ್ಯ ಉಳಿಸಲಿ, ಈಗ ನನಗೆ ಎಪ್ಪತ್ತು. ತಿನ್ನೋದು ಒಪ್ಪತ್ತು. ಎರಡು ಹೊತ್ತು ಬಸವನ ಹಸಿವು ಪ್ರೋಟಿನ್ ನೀಡುತ್ತಿದೆ ಎಂದರು.


Spread the love

About Laxminews 24x7

Check Also

ಮಾರಾಟಕ್ಕೆ ಇಟ್ಟಿದ್ದ ಮಗು ಸಾವು

Spread the love ಬೆಳಗಾವಿ: ಮಾರಾಟಕ್ಕೆ ಒಳಗಾಗುವುದನ್ನು ತಪ್ಪಿಸಿ, ರಕ್ಷಿಸಲಾಗಿದ್ದ ಹೆಣ್ಣು ಮಗು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಗುರುವಾರ (ಜೂನ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ