ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.
ಬುಧವಾರ ಸಾಯಂಕಾಲ ಬಿಮ್ಸ ಆವರಣದಲ್ಲಿ ಜಿನೊಮ್ ಸಿಕ್ವೆನ್ಸಿಂಗ್ ಲ್ಯಾಬ್, ನವಿಕೃತ ಅಡುಗೆ ಕೋಣೆ, ನವಿಕೃತ ವಿಶೇಷ ಕೊಠಡಿಗಳು, ಹೊಸ ವೈದ್ಯಕೀಯ ತುರ್ತು ನಿಗಾ ಘಟಕಗಳನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಉದ್ಘಾಟಿಸಿದರು. ಈ ವೇಳೆ ಜಲಸಂಪನ್ಮೂಲ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಉತ್ತರ ಶಾಸಕ ಅನಿಲ್ ಬೆನಕೆ, ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್, ಡಿಸಿ ಆರ್.ವೆಂಕಟೇಶ್‍ಕುಮಾರ್, ಬಿಮ್ಸ ಆಡಳಿತ ಮೇಲುಸ್ತುವಾರಿ ಮತ್ತು ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯಾ ಬಿಸ್ವಾಸ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಡಾ.ಪಿ.ಜಿ.ಗಿರೀಶ್, ಬಿಮ್ಸ ನಿರ್ದೇಶಕ ಡಾ.ಆರ್.ಜಿ.ವಿವೇಕಿ, ಬಿಮ್ಸ ವೈದ್ಯಕೀಯ ಅಧೀಕ್ಷಕ ಡಾ.ಎ.ಬಿ.ಪಾಟೀಲ್, ಜಿಲ್ಲಾ ಶಸ್ತ್ರ ಚಿಕಿತ್ಸಿಕ ಡಾ.ಸುಧಾಕರ್ ಆರ್.ಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.